ಟಿಪ್ಪು (Tippu ) ಬ್ರಿಟಿಷ (British) ರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ. ಅದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT.Ravi) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಟಿಪ್ಪು ಬದಲಾಗಿ ಅಬ್ದುಲ್ ಕಲಾಂ (Abdul kalam) ಪ್ರತಿಮೆ ಸ್ಥಾಪಿಸುತ್ತಿದ್ದರೆ ಬೆಂಬಲವಾಗಿ ನಿಲ್ಲುತ್ತಿದ್ದೆ.
ಕಾಂಗ್ರೆಸ್ ನವರು ಒಡೆಯರ್ ಕುಟುಂಬದ ಪರವಾಗಿ ನಿಲ್ತಾರೋ, ಟಿಪ್ಪು ಪರವಾಗಿ ನಿಲ್ತಾರೋ ಎಂಬ ಆಯ್ಕೆ ಅವರಿಗೆ ಬಿಡುತ್ತೇನೆ. ಶುದ್ಧ ರಕ್ತದವರು ಒಡೆಯರ್, ಮದಕರಿ ನಾಯಕ ಪರ ನಿಲ್ಲುತ್ತಾರೆ. ನಾನು ಶುದ್ಧ ರಕ್ತ ಇರುವವನು ಎಂದು ಕಾಂಗ್ರೆಸ್ಗೆ ಸಿ.ಟಿ.ರವಿ ಟಾಂಗ್ ನೀಡಿದರು.
ಟಿಪ್ಪು ಅದ್ಯಾವ ಹುಲಿ ಅಂತಾ ಗೊತ್ತಿಲ್ಲ
ಟಿಪ್ಪು ನೇತೃತ್ವದಲ್ಲಿ ಯಾವುದೇ ನಿರ್ಣಾಯಕ ಯುದ್ಧ ಗೆದ್ದಿಲ್ಲ. ಆದರೂ ಟಿಪ್ಪು ಹುಲಿ, ಯಾವ ಹುಲಿ ಅಂತಾ ಗೊತ್ತಿಲ್ಲ. ಟಿಪ್ಪು ಸುಲ್ತಾನ್ ಮತ್ತು ಹೈದರಾಲಿಯ ಸಂತಾನ ಮುಂದುವರಿದಿದ್ದರೆ, ಇವತ್ತು ಹಾಸನದ ಹೆಸರು ಕೈಮಾಬಾದ್ ಎಂದು ಆಗುತ್ತಿತ್ತು. ಓಟಿಗಾಗಿ ಜೊಲ್ಲು ಸುರಿಸುವ ಜನರು ಇದನ್ನು ನೋಡಬೇಕು. ರಾಮನಗರದ ಹೆಸರು ಶಂಶೇರಾಬಾದ್ ಎಂದು ಆಗುತ್ತಿತ್ತು. ಜಮೀರ್ ಖಾನ್ ಜೊತೆ ಇನ್ನಷ್ಟು ಖಾನ್ ಗಳು ಹುಟ್ಟಿಕೊಳ್ಳುತ್ತಿದ್ದರು. ಮೈಸೂರಿನಲ್ಲಿ ನಿಜವಾಗಿಯೂ ಪ್ರತಿಮೆ ಸ್ಥಾಪನೆ ಮಾಡುವುದಿದ್ದರೆ ಉರಿಗೌಡ ಮತ್ತು ದೊಡ್ಡನಂಜೇಗೌಡ ಪ್ರತಿಮೆ ನಿರ್ಮಿಸಬೇಕು ಎಂದು ಹೇಳಿದರು. ಇದನ್ನೂ ಓದಿ : – ಮಹೇಶ್ ಬಾಬು ತಂದೆ ನಟ ಕೃಷ್ಣ ಆರೋಗ್ಯದಲ್ಲಿ ಏರುಪೇರು
ಕಾಂಗ್ರೆಸ್ ನವರು ಇತಿಹಾಸ ಮೊದಲು ಓದಲಿ
ಶಾಲೆಗಳಿಗೆ ಕೇಸರಿ ಬಣ್ಣಕ್ಕೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನವರು ಇತಿಹಾಸ ಮೊದಲು ಓದಲಿ. ಕಾಮರಾಜ ಸಮಿತಿ ಮೊದಲು ಶಿಫಾರಸು ಮಾಡಿದ್ದೇ ಭಗವಾ ಧ್ವಜವನ್ನು. ಕೆಲವರಿಗೆ ಕುಂಕುಮ, ಕೇಸರಿ ಪೇಟ ಕಂಡರೆ ಆಗಲ್ಲ. ಕಾಂಗ್ರೆಸ್ ನವರಿಗೆ ತಾಕತ್ ಇದ್ದರೆ ರಾಷ್ಟ್ರಧ್ವಜದಲ್ಲಿ ಇರುವ ಕೇಸರಿ ಬಣ್ಣವನ್ನು ತೆಗೆದು ಹಾಕಲಿ. ಆನಂತರ ಮಾತಾಡೋಣ ಎಂದು ಹೇಳಿದ್ರು.
ಇದನ್ನೂ ಓದಿ : – ಮಿರ್ಜಾ ಮಲಿಕ್ ಶೋ ಪ್ರಚಾರಕ್ಕಾಗಿ ಡಿವೋರ್ಸ್ ನಾಟಕವಾಡಿದ್ರಾ..?