ಗುಜರಾತ್ ( GUJURATH ) ತಲುಪಿದ ಪ್ರಧಾನಿ ನರೇಂದ್ರ ಮೋದಿ ( NARENDRA MODI ) ಪ್ರಚಾರ ರ್ಯಾಲಿ ಆರಂಭಿಸುವ ಮುನ್ನ ಸೋಮನಾಥ ದೇವಾಲಯ ( SOMANATHA TEMPLE ) ಕ್ಕೆ ಭೇಟಿ ನೀಡಿದ್ದಾರೆ.
ದೇವಾಲಯದ ದರ್ಶನದ ನಂತರ ಅವರು ವೆರಾವಲ್ ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ವೆರಾವಲ್ ಮೀನುಗಾರಿಕೆ ಉದ್ಯಮಗಳ ಕೇಂದ್ರವಾಗಿದೆ. ಇದಾದ ನಂತರ ಧೋರಾಜಿ, ಅಮ್ರೇಲಿ ಮತ್ತು ಬೊಟಾಡ್ನಲ್ಲಿ ಇನ್ನೂ ಮೂರು ಚುನಾವಣಾ ರ್ಯಾಲಿಗಳು ನಡೆಯಲಿವೆ.ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಮೋದಿ ಅವರು ಸೋಮನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸಲಾಗಿದೆ. ಇದನ್ನೂ ಓದಿ :– ಮಂಗಳೂರಿನ ಬಾಂಬ್ ಪ್ರಕರಣಕ್ಕೂ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ – ಪ್ರೇಮರಾಜ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ( J.P NADDA ) ಕೂಡಾ ಗುಜರಾತ್ ನಲ್ಲಿದ್ದಾರೆ. ಗುಜರಾತ್ ನಲ್ಲಿ ಎರಡು ಹಂತಗಳಾಗಿ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಮತದಾನ ನಡೆಯಲಿದೆ.ಡಿಸೆಂಬರ್ 8 ರಂದು ಮತಗಳ ಎಣಿಕೆ ನಡೆಯಲಿದೆ. ಹಿಮಾಚಲ ಪ್ರದೇಶದ ಮತಗಳ ಎಣಿಕೆಯೂ ಅದೇ ದಿನ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸುವ ತಮ್ಮ ಕನಸನ್ನು ನನಸಾಗಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, “ಈ ಬಾರಿ ಪ್ರತಿ ಮತಗಟ್ಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ” ಮತ್ತು “ಪ್ರತಿ ಮತಗಟ್ಟೆಯಲ್ಲಿ ದಾಖಲೆಗಳನ್ನು ಮುರಿಯುವಂತೆ” ಮತದಾರರನ್ನು ಕೇಳಿಕೊಂಡರು.
ಇದನ್ನೂ ಓದಿ :– ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಿದೆ ಕಾಂಗ್ರೆಸ್ ಸ್ಥಿತಿ- ಸಚಿವ ಸುಧಾಕರ್