ಇದು ನನ್ನ ಮಗಳ ಜೀವನ ಅವಳು ಏನು ನಿರ್ಧಾರ ತಗೋತ್ತಾಳೆ ಅನ್ನೋದು ಅವಳಿಗೆ ಬಿಟ್ಟಿದ್ದು – ವೈಷ್ಣವಿ ತಂದೆ ರವಿಕುಮಾರ್

ಕಿರುತೆರೆ ನಟಿ ವೈಷ್ಣವಿ ಗೌಡ ( Vaishnavi Gowda ) ನಿಶ್ಚಿತಾರ್ಥದ ವಿವಾದ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ಕಿರುತೆರೆ ನಟಿ ವೈಷ್ಣವಿ ಗೌಡ ( Vaishnavi Gowda ) ನಿಶ್ಚಿತಾರ್ಥದ ವಿವಾದ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ವಿದ್ಯಾಭರಣ ವಿಷ್ಯವಾಗಿ ಸಾಕಷ್ಟು ಆರೋಪ ಕೇಳಿ ಬಂದ ಬೆನ್ನಲ್ಲೇ ವೈಷ್ಣವಿ ತಂದೆ ರವಿಕುಮಾರ್ ( RAVI KUMARA ) ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ವಿದ್ಯಾಭರಣ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು. ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ನಟಿ ಮನವಿ ಮಾಡಿದ್ದರು. ಇದೀಗ ವೈಷ್ಣವಿ ತಂದೆ ರವಿಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ನಮಗೂ ಈ ಬಗ್ಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ. ಇದೀಗ ಮದುವೆ ಕ್ಯಾನ್ಸಲ್ ಆಗಿದೆ. ಇಷ್ಟೆಲ್ಲ ನಡೆದ ಮೇಲೆ ಈ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನಿಸಿತು. ನಮಗೂ ಶಾಕ್ ಆಗಿದೆ. ವೈಷ್ಣವಿ ರೂಂ ನಿಂದ ಹೊರ ಬಂದಿಲ್ಲ. ತುಂಬಾ ಫೆಡ್ ಅಪ್ ಆಗಿದ್ದಾರೆ. ಇದನ್ನೂ ಓದಿ : – ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನ

ನಮಗೂ ಕೂಡ ಈ ಬಗ್ಗೆ ಮೊದಲೂ ಏನೂ ಗೊತ್ತಿರಲಿಲ್ಲ. ಆಡಿಯೋ ಬಗ್ಗೆ ಟಿವಿಯಲ್ಲಿ ನೋಡಿದಾಗ ಗೊತ್ತಾಗಿದ್ದು. ಆ ಆಡಿಯೋ ಕೇಳಿ ತುಂಬಾ ಬೇಜಾರಾಗಿದೆ. ಜನವರಿಯಲ್ಲಿ ಎಂಗೇಜ್ ಮೆಂಟ್ ಮಾಡಲು ತೀರ್ಮಾನ ಮಾಡಿದ್ದೇವು. ಸದ್ಯ ಇವಾಗ ಬೊಟ್ಟು ಇಡುವ ಶಾಸ್ತ್ರ ಮಾಡಿದ್ದೇವು. ಯಾರೋ ಆಗದೇ ಇರೋರು ಈ ರೀತಿ ಮಾಡಿರಬಹುದು. ಇದು ನನ್ನ ಮಗಳ ಜೀವನ. ಅವಳ ಸಂಪೂರ್ಣ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಅವಳು ಏನು ನಿರ್ಧಾರ ತಗೋತ್ತಾಳೆ ಅನ್ನೋದು ಅವಳಿಗೆ ಬಿಟ್ಟಿದ್ದು ಎಂದು ವೈಷ್ಣವಿ ತಂದೆ ಮಾತನಾಡಿದ್ದಾರೆ.

ಇದನ್ನೂ ಓದಿ : –  ಸಾದಲಿಯ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!