ವೈಷ್ಣವಿ ಗೌಡ ( Vaishnavi Gowda ) ಮದುವೆ ವಿಚಾರ ಸಾಕಷ್ಟು ಸುದ್ದಿಯಾಗಿದೆ. ಉದ್ಯಮಿ ವಿದ್ಯಾಭರಣ್ ( VIDYA BHARAN ) ಜತೆ ಅವರ ವಿವಾಹ ಮಾತುಕತೆ ನಡೆದಿತ್ತು.
ಅದಕ್ಕೂ ಮೊದಲೇ ವಿದ್ಯಾಭರಣ್ ಅವರ ಆಡಿಯೋ ವೈರಲ್ ಆಗಿ ಸಾಕಷ್ಟು ವಿವಾದ ಆಗಿತ್ತು. ಈ ಸಂಬಂಧ ವೈಷ್ಣವಿ ಗೌಡ ಕುಟುಂಬದವರು ಸುದ್ದಿಗೋಷ್ಠಿ ಕರೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈಷ್ಣವಿ ತಾಯಿ ಬಾನು ರವಿಕುಮಾರ್, ( BHANU RAVIKUMAR ) ವಿದ್ಯಾಭರಣ್ ಚಾಕ್ಲೇಟ್ ಬಾಯ್ ಎಂಬ ಮೂವಿಯಿಂದ ಪರಿಚಯವಾದ ಹುಡುಗ . ಶೂಟಿಂಗ್ ಕೆಲಸ ಯಾವುದೋ ಕಾರಣದಿಂದ ನಿಲ್ಲಿಸಿತ್ತು. ತದನಂತರ ವೈಷ್ಟವಿ ಬಿಗ್ ಬಾಸ್ ಗೆ ಹೋದ್ಲು. ಅವರ ಮನೇಲಿ ಕೂಡಾ ವೈಷ್ಟವಿ ಚೆನ್ನಾಗಿ ಹಾಡಿದ್ಲು ಅಂತಾ ವಿಶ್ ಮಾಡಿದ್ರು. ತದನಂತರ ನಿಮ್ಮ ಮಗಳ ನಮಗೆ ಇಷ್ಟ ಅಂತಾ ಹೇಳಿದ್ರು . ಇದನ್ನೂ ಓದಿ : – ನರ್ಮದಾ ಘಾಟ್ ನಲ್ಲಿ ರಾಹುಲ್ ಗಾಂಧಿ ಜೊತೆ ಆರತಿ ಬೆಳಗಿದ ಪ್ರಿಯಾಂಕಾ ಗಾಂಧಿ
ಆವಾಗ ನಾವು ಕೆಲವೊಂದು ಕಡೆ ಕೇಳಿ, ನಾವು ಎಲ್ಲಾ ಶಾಸ್ತ್ರ ಕೂಡಿ ಬಂದ ಮೇಲೆ 11 ನೇ ತಾರೀಖು ಹೆಣ್ಣು ನೋಡೋ ಶಾಸ್ತ್ರ ಮಾಡಿದ್ದೀವಿ. ಬರೀ ಹೆಣ್ಣು ನೋಡುವ ಶಾಸ್ತ್ರ ಅಂತಾ ಯಾರಿಗೂ ಹೇಳಿರಲಿಲ್ಲ. ಮುಂದಿನ ಭಾನುವಾರ ನಾವು ಕೂಡಾ ಅವರ ಮನೆಗೆ ಹೋಗ್ಬೇಕಾಗಿತ್ತು.
ಅಷ್ಟರಲ್ಲಿ ಇದೆಲ್ಲಾ ಆಯ್ತು. ಪೋಟೋಗಳು ಕೆಲವೊಂದು ಕಡೆ ಹರಿದಾಡಿದ ಮೇಲೆ ನಮಗೆ ಯಾವುದೋ ಒಂದು ಹುಡುಗಿ ಕಾಲ್ ಮಾಡಿದ್ಲು. ಆವಾಗ ನಿಮ್ಮ ಹತ್ರ ಮಾತನಾಡ್ಬೇಕು ಅಂತಾ ಹೇಳಿದ್ರು. ನಿಮ್ಮತ್ರ ಏನಾದ್ರೂ ಡಾಕ್ಯುಮೆಂಟ್ ಇದ್ರೇ ಕೊಡಿ ಅಂದೆ. ಅವರು ಇದುವರೆಗೂ ಯಾರು ಬಂದಿಲ್ಲ. ಈ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದ್ರು.
ಇದನ್ನೂ ಓದಿ : – ಬೆಂಗಳೂರಿಗೂ ತಟ್ಟಿದ ಧರ್ಮ ದಂಗಲ್..!