ಕರ್ನಾಟಕ (Karnataka) ದ ಯಾವ ಪ್ರದೇಶವು ಮಹಾರಾಷ್ಟ್ರ(Maharastra) ಕ್ಕೆ ಹೋಗೋಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Basavaraj bommai) ಹೇಳಿದ್ದಾರೆ. ದಾವಣಗೆರೆ (Davangere) ಯಲ್ಲಿ ಮಾತನಾಡಿದ ಅವರು 2004 ರಲ್ಲಿ ಮಹಾರಾಷ್ಟ್ರ ದಾವೆ ಹೂಡಿದ್ದಾರೆ. ಸೀನಿಯರ್ ಅಡ್ವೋಕೇಟ್ ಗಳನ್ನು ನೇಮಿಸಿದ್ದೇವೆ . ಕರ್ನಾಟಕ ಗಡಿ ರಕ್ಷಣಾ ಆಯೋಗಕ್ಕೆ ಶಿವರಾಜ್ ಪಾಟೀಲ್ ನೇಮಕ ಮಾಡಿದ್ದೇವೆ.
ಸಂವಿಧಾನ ಕಾನೂನು ಬದ್ಧವಾಗಿ ನಾವಿದ್ದೇವೆ. ಮಹಾರಾಷ್ಟ್ರಕ್ಕೆ ನಮ್ಮ ಯಾವುದೇ ಪ್ರದೇಶ ಹೋಗೋಲ್ಲ ಅನ್ನೋ ವಿಶ್ವಾಸ ಇದೆ ಎಂದು ಹೇಳಿದ್ರು. ಇದೇ ವಿಚಾರಕ್ಕೆ ಮುಂದಿನ ವಾರ ಸರ್ವಪಕ್ಷ ಸಭೆ ಕರೆದಿದ್ದೇನೆ. ಎಲ್ಲಾ ಪಕ್ಷದ ನಾಯಕರನ್ನು ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶರದ್ ಪವಾರ್ (Sharad pawar) ಇದರ ಮೇಲೆ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಅವರು ಬೆಳಗಾವಿ ವಿಚಾರದಲ್ಲಿ ಕಂಡ ಕನಸು ನನಸು ಆಗೋದಿಲ್ಲ . ಈಗಲು ಆಗೋಲ್ಲ ಮುಂದೆಯೂ ಆಗೋಲ್ಲ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ : – ಹಿರಿಯ ನಟ ವಿಕ್ರಮ್ ಗೋಖಲೆ ನಿಧನ