ಮಹಾರಾಷ್ಟ್ರ ( MAHARASTRA ) ಗಡಿ ವಿವಾದಕ್ಕೆ ಸರ್ವಪಕ್ಷ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( SIDDARAMAIAH ) ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದೊಂದು ಗಡಿ ವಿಚಾರ, ಸರ್ವ ಪಕ್ಷಗಳ ಸಭೆ ಕರೆಯಲಿ. ಗಡಿ ವಿವಾದಕ್ಕೆ ಒಳ್ಳೆಯ ಲಾಯರ್ ಇಟ್ಟು ನಡೆಸಬೇಕು. ಮಹಾರಾಷ್ಟ್ರ ಕೇಸ್ ಮೆಂಟನೇಬಲ್ ಅಲ್ಲ. ನಿವೃತ್ತ ಜಡ್ಜ್ ಮಂಜುನಾಥ್ ನಿಧನವಾಗಿ 10 ತಿಂಗಳು ಆಯ್ತು. ಇಲ್ಲಿಯವರೆಗೆ ಗಡಿ ಆಯೋಗದ ಅಧ್ಯಕ್ಷ ಮಾಡಿರಲಿಲ್ಲ. ಇದನ್ನೂ ಓದಿ : – ರಾಹುಲ್ ಗಾಂಧಿ ಬುಲೆಟ್ ಸವಾರಿ – ವೀಡಿಯೋ ವೈರಲ್
ಈಗ ಶಿವರಾಜ್ ಪಾಟೀಲ್ ( SHIVARAJ PATIL ) ನೇಮಕ ಮಾಡಿದ್ದಾರೆ. ಸರ್ವಪಕ್ಷ ಸಭೆ ಕರೆಯಲಿ ಎಂದು ನಾನು ಹೇಳುತ್ತೇನೆ. ಮಹಾರಾಷ್ಟ್ರ ಪುಂಡಾಟ ನಿಲ್ಲಿಸಬೇಕು. ಎರಡು ಕಡೆ ಬಿಜೆಪಿ ಸರ್ಕಾರ ಇದೆ. ಮೊದಲು ಮಹಾರಾಷ್ಟ್ರ ಪುಂಡಾಟ ನಿಲ್ಲಿಸುವ ಕೆಲಸ ಮಾಡಲಿ. ಬೊಮ್ಮಾಯಿ ಮಹಾರಾಷ್ಟ್ರ ಸಿಎಂ ಜೊತೆ ಮಾತನಾಡಬೇಕು. ಪುಂಡಾಟ ಮಾಡದಂತೆ ತಡೆಯಬೇಕು ಎಂದು ಸಿಎಂಗೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ : – ಜೆಡಿಎಸ್ ನಲ್ಲಿ ಕುಟುಂಬದವರು ಹೇಳಿದರೆ ಮಾತ್ರ ಹೆಬ್ಬೆಟ್ಟು ಒತ್ತೋದು – ಅಶೋಕ್ ವ್ಯಂಗ್ಯ