ಪ್ರಧಾನಿ ನರೇಂದ್ರ ಮೋದಿ ( NARENDRA MODI ) ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ 95 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಮೃತ್ ಕಾಲದಲ್ಲಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದೆ. ಇದು ನಮಗೆ ಒಂದು ಅವಕಾಶವಾಗಿದೆ. ದೇಶದಾದ್ಯಂತದ ಜನರು ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಎಷ್ಟು ಹೆಮ್ಮೆ ಇದೆ ಎಂದು ನನಗೆ ಪತ್ರ ಬರೆದಿದ್ದಾರೆ.
PM Modi's Mann Ki Baat with the Nation, November 2022
https://t.co/VjkBzXa3hO— Basavaraj S Bommai (@BSBommai) November 27, 2022
ಅಮೃತ್ ಕಾಲದಲ್ಲಿ ಭಾರತವು ಈ ಜವಾಬ್ದಾರಿಯನ್ನು ಪಡೆದುಕೊಂಡಿದೆ ಎಂದಿದ್ದಾರೆ ಮೋದಿ. ಜಿ 20 ಅಧ್ಯಕ್ಷ ಸ್ಥಾನ ನಮಗೆ ಒಂದು ಅವಕಾಶ. ನಾವು ಜಾಗತಿಕ ಒಳಿತಿನತ್ತ ಗಮನಹರಿಸಬೇಕು, ಅದು ಶಾಂತಿ, ಏಕತೆ ಅಥವಾ ಸುಸ್ಥಿರ ಅಭಿವೃದ್ಧಿಯೇ ಆಗಿರಲಿ ಈ ವಿಷಯಗಳಿಗೆ ಸಂಬಂಧಿಸಿದ ಸವಾಲುಗಳಿಗೆ ಭಾರತ ಪರಿಹಾರವನ್ನು ಹೊಂದಿದೆ. ನಾವು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಥೀಮ್ ಅನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ದನ್ನೂ ಓದಿ : – ರಾಹುಲ್ ಗಾಂಧಿ ಬುಲೆಟ್ ಸವಾರಿ – ವೀಡಿಯೋ ವೈರಲ್