ಮಧುರೆಯಲ್ಲಿ ಶ್ರೀ ಶನಿ ಮಹಾತ್ಮ ದೇವರ ದರ್ಶನ ಪಡೆದ ಹೆಚ್.ಡಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( .HD KUMARASWAMY ) ಇಂದು ಬೆಳಗ್ಗೆ ಪುಣ್ಯಕ್ಷೇತ್ರ ಮಧುರೆಯಲ್ಲಿ ಶ್ರೀ ಶನಿ ಮಹಾತ್ಮ ದೇವರ ದರ್ಶನ ಪಡೆದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( H.D KUMARASWAMY ) ಇಂದು ಬೆಳಗ್ಗೆ ಪುಣ್ಯಕ್ಷೇತ್ರ ಮಧುರೆಯಲ್ಲಿ ಶ್ರೀ ಶನಿ ಮಹಾತ್ಮ ದೇವರ ದರ್ಶನ ಪಡೆದರು. ಇಂದು ಜೆಡಿಎಸ್ ನ ಪಂಚರತ್ನ ( PANCHARATHNA ) ರಥಯಾತ್ರೆಯು 13ನೇ ದಿನಕ್ಕೆ ಕಾಲಿಟ್ಟಿದೆ. ಪಂಚರತ್ನ ರಥಯಾತ್ರೆಯು ಇಂದು ನೆಲಮಂಗಲಕ್ಕೆ ತಲುಪುತ್ತಿದೆ.


ನಂತರ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಈ ಭಾಗದ ಜನರ ಹೃದಯದಲ್ಲಿ ನನ್ನ ಕಾರ್ಯಕ್ರಮ ಬಗ್ಗೆ ಪ್ರೇರೇಪಣೆ ಇದೆ. ಪಂಚರತ್ನ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜನಾಂಗದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಒಂದು ಬದಲಾವಣೆ ತರಲೇಬೇಕು ಅಂತ ನಿರ್ಧರಿಸಿದ್ದಾರೆ. ಇದು ನಾನು ಸಂಚಾರ ಮಾಡುವ ಭಾಗದ ನಾಡಿ ಮಿಡಿತವಾಗಿದೆ ಎಂದು ಹೇಳಿದ್ರು.

ವಿರೋಧಿಗಳ ಅಪಪ್ರಚಾರಕ್ಕೆ ತಿರುಗೇಟು
ನಾನು ಮಾತನಾಡಿರೋ ಕೆಲ ಮಾತನ್ನ ಸೋಶಿಯಲ್ ಮೀಡಿಯಾದಲ್ಲಿ ತಿರುಚಿ ಹೇಳಲಾಗ್ತಿದೆ. ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಯಾವುದೇ ವ್ಯಕ್ತಿ ನನನ್ನು ಭೇಟಿ ಮಾಡಲು ಬಂದ್ರೆ ಅಸ್ಪೃಷ್ಯವಾಗಿ ನೋಡಿಲ್ಲ. ಒಮ್ಮೆ ಸಿಎಂ ಆಗಿದ್ದಾಗ ನಾನು ಕೆ.ಆರ್ ಪೇಟೆಗೆ ಭೇಟಿ ನೀಡಿದ್ದೆ. ಒಬ್ಬ ಬಾಲಕಿ ನನ್ನ ಕಾರು ತಡೆದು ಹೃದಯ ಕಾಯಿಲೆ ಇದೆ ಎಂದು ದುಃಖ ತೋಡಿಕೊಂದಿದ್ದಳು. ಚಿಕಿತ್ಸೆ ಕೊಡಿಸಿ ಅಂತ ಮನವಿ ಮಾಡಿದ್ದಳು. ಸಾ.ರಾ ಮಹೇಶ್ ಗೆ ಹೇಳಿ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದೆ. ಆ ಬಾಲಕಿಗೆ ಸಿಎಂ ನಿವಾಸದಲ್ಲೇ ವಾಸ್ತವ್ಯಕ್ಕೇ ಅವಕಾಶ ಕಲ್ಪಿಸಿ ಚಿಕಿತ್ಸೆ ಕೊಡಿಸಿದ್ದೆ. ಯಾವ ಸಿಎಂ ಆ ರೀತಿ ಮಾಡಿದ್ದಾರೆ ಅಂತ ಟೀಕೆ ಮಾಡುವವರು ಹೇಳಲಿ.

ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ಕೃತಿಯಲ್ಲಿ ತೋರಿಸಿದ್ದೇನೆ. ಮೊನ್ನೆ ಇಬ್ರಾಹಿಂ ಹುಬ್ಬಳ್ಳಿಯಲ್ಲಿ ನಾನು ಸಿಎಂ ಅಭ್ಯರ್ಥಿ ಆಗ್ತೀನಿ. ಕುಮಾರಸ್ವಾಮಿ ದೆಹಲಿಗೆ ಹೋಗುವ ಸಮಯ ಬಂದಿದೆ ಅಂತ ಹೇಳಿದ್ದಾರೆ. ಆದ್ರೆ ನಮ್ಮಲ್ಲಿ ಮುಸ್ಲಿಮರ ಬಗ್ಗೆ, ಅವರು ಪಾಕಿಸ್ತಾನದವರು, ಪಾಕಿಸ್ತಾನಕ್ಕೆ ಕಳಿಸಿ ಅಂತ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿ ಯವರು ಈ ರೀತಿ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದೆ. ಯಾಕೆ ಮುಸ್ಲಿಮರು ಸಿಎಂ ಆಗಬಾರದಾ.. ? ಅವರೇನು ಅಸ್ಪೃಶ್ಯರ ಅಂತಾ ಪ್ರಶ್ನೆ ಮಾಡಿದೆ. ನಾನು ಕೊಟ್ಟ ಈ ಹೇಳಿಕೆ ಅಸ್ಪೃಶ್ಯತೆಯನ್ನು ಪೋಷಿಸುವ ಉದ್ದೇಶ ಇಟ್ಟುಕೊಂಡು ಹೇಳಿದ್ದಲ್ಲ. ನಾನು ಅಸೃಷ್ಯತೆಗೆ ವಿರೋಧಿ. ಅದೆಲ್ಲವನ್ನೂ ಕೃತಿಯಲ್ಲಿ ತೋರಿಸಿದ್ದೇನೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದ್ರೂ ಹೀಗೆ ಚರ್ಚೆಯಾಗ್ತಿದೆ. ಮೊನ್ನೆ ಸಿದ್ದರಾಮಯ್ಯ ಕೂಡ ಅವರೇನು ಅಸ್ಪೃಶ್ಯರ ಅಂತ ಒಂದು ಹೇಳಿದ್ದಾರೆ. ನನಗೂ ಯಾರೋ ಆ ವಿಡಿಯೋ ತೋರಿಸಿದರು. ಸಿದ್ದರಾಮಯ್ಶ ( SIDDARAMAIAH )ಹೇಳಿಕೆ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ. ನನ್ನ ಹೇಳಿಕೆ ಬಗ್ಗೆ ದೊಡ್ಡ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಇದನ್ನು ನೋಡಿದರೆ ತಿಳಿಯುತ್ತೆ, ಪಿತೂರಿ ಅಂತ. ಕಳೆದ 75 ವರ್ಷಗಳಿಂದ ದಲಿತರನ್ನು ಶೋಷಣೆ ಮಾಡಿದ ಜನ ನನ್ನ ಹೇಳಿಕೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನನ್ನ ಬಳಿ ಕಷ್ಟ ಹೇಳಿಕೊಳ್ಳಲು ಬರುವ ಹೆಚ್ಚು ಜನ ಶೋಷಿತ ಜನರೇ. ಅಂತಹ ಜನಕ್ಕೆ ಆರ್ಥಿಕ ಮತ್ತು ಶೈಕ್ಷಣಿಕ ಚೈತನ್ಯ ಕಲಿಸುವುದೇ ನನ್ನ ಉದ್ದೇಶ. ಅದಕ್ಕೆ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ. ರಾಜಕೀಯವಾಗಿ ರಾಷ್ಟ್ರೀಯ ಪಕ್ಷಗಳು ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ. ದುರ್ಬಳಕೆ ಮಾಡಿಕೊಳ್ಳುವವರು ಬಿಜೆಪಿ ಯಂತವರು. ಇದಕ್ಕೆ ನಾನು ಹೆದರಲ್ಲ. ಅಪಪ್ರಚಾರಕ್ಕೇ ಸೊಪ್ಪು ಹಾಕಲ್ಲ. ಕೆಲವರಿಗೆ ಸುಳ್ಳು ಹಬ್ಬಿಸೋದೆ ಕೆಲ್ಸ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು.  ಇದನ್ನೂ ಓದಿ : –  ಮಹಾರಾಷ್ಟ್ರ ನಾಯಕರು ಖಾಲಿ ಓಲಗ ಊದುತ್ತಿದ್ದಾರೆ- ಸಿಎಂ ಇಬ್ರಾಹಿಂ ವ್ಯಂಗ್ಯ

ದೊಡ್ಡಬಳ್ಳಾಪುರ: ತೆರವಾದ ತ್ಯಾಜ್ಯ / ಅಂಗನವಾಡಿ ಮಕ್ಕಳು‌ ನಿರಾಳ | ಹರಿತಲೇಖನಿ

ದೊಡ್ಡಬಳ್ಳಾಪುರ ( DODDABALLAPURA ) ದಲ್ಲಿ ಘನತ್ಯಾಜ್ಯ ವಿಲೇವಾರಿ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರು ಕಸವನ್ನು ಎಲ್ಲೆಂದರಲ್ಲಿ ಸುರಿಯುವ ಕೆಲ್ಸ ನಡೆಯುತ್ತಿದೆ. ಮಂಡೂರಿನಲ್ಲಿ ಘನತ್ಯಾಜ್ಯ ತೆರವಿಗೆ 900ಕೋಟಿ ವ್ಯಯ ಆಗಿದೆ ಅಂತ. ಹೀಗೇ ತ್ಯಾಜ್ಯ ವಿಲೇವಾರಿ ಮಾಡಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇಲ್ಲಿ ಕೆಲ ಮಾಫಿಯಾಗಳಿವೆ. ಕಸದ ಸಮಸ್ಯೆಯನ್ನು ಪರಿಹರಿಸಲು ಬಿಡಲ್ಲ. ನಮ್ಮ ಸರ್ಕಾರ ಬಂದ್ರೆ ಇದಕ್ಕೆ ಶಾಶ್ವತ ಪರಿಹಾರ ನೀಡ್ತೀವಿ ಎಂದು ಹೇಳಿದ್ರು.


ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಹೆಚ್ಚು ಕಡಿಮೆ 12 ದಿನದಲ್ಲಿ 11 ಜನ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ದೊಡ್ಡಬಳ್ಳಾಪುರದಲ್ಲಿ ಮುನೇಗೌಡರ ಹೆಸರು ಘೋಷಣೆ ಮಾಡುತ್ತೇವೆ. ಆದರೆ ಇಲ್ಲಿ ಕೆಲ ಸಮಸ್ಯೆಗಳಿವೆ. ಪರಿಹಾರ ಮಾಡುತ್ತೇನೆ. ಈಗಾಗಲೇ ಪಟ್ಟಿ ಅಂತ್ಯವಾಗಿದೆ. ಅದರಲ್ಲಿ ದೊಡ್ಡಬಳ್ಳಾಪುರ ಅಭ್ಯರ್ಥಿ ಹೆಸರೂ ಕೂಡ ಇರಲಿದೆ.ದೊಡ್ಡಬಳ್ಳಾಪುರ ಗೆಲ್ಲೋದೆ ನಮ್ಮ ಗುರಿ ಎಂದು ಹೇಳಿದ್ರು.

Need to augment public health management: Sudhakar | Deccan Herald
ಡಾ.ಕೆ.ಸುಧಾಕರ್ ( SUDHAKAR ) ನೆಲಮಂಗಲ ಸ್ಯಾಟಲೈಟ್ ಸಿಟಿ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಮೂರುವರೆ ವರ್ಷಗಳಿಂದ ಮಾಡದವರು, ಮೂರು ತಿಂಗಳಲ್ಲಿ ಮಾಡ್ತಾರಾ..? 2006ರಲ್ಲಿ ಮೂರು ಸ್ಯಾಟಲೈಟ್ ನಗರ ಮಾಡಲು ಮುಂದಾಗಿದೆ. ಬಿಡದಿಯಲ್ಲಿ ಸ್ಯಾಟಲೈಟ್ ಟೌನ್ ಮಾಡುವಾಗ ಕಾಂಗ್ರೆಸ್ ವಿರೋಧಿಸಿದ್ರು. ಈಗ ಬೆಂಗಳೂರು ಏನು ಮಾಡಿದ್ದಾರೆ ಗೊತ್ತಿಲ್ವಾ.? ನೆಲಮಂಗಲ ಈಗಾಗಲೇ ಸಾಕಷ್ಟು ಬೆಳದಿದೆ. ನೆಲಮಂಗಲ ಈಗಾಗಲೇ ಬೆಂಗಳೂರಿಗೆ ಸೇರಿಕೊಂಡಿದೆ. ಇನ್ಯಾವಾಗ ಇವರು ಸ್ಯಾಟಲೈಟ್ ಟೌನ್ ಮಾಡೋದು. ಬಹುಷ ಅವರು ಮುಂದಿನ ಚುನಾವಣೆ ಮುಗಿದ ಮೇಲೆ ಮಾಡಬಹುದೇನೋ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : – ಟೊಯೋಟ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಿಧನ – ಸಂತಾಪ ಸೂಚಿಸಿದ ಸಿಎಂ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!