ಶ್ರದ್ದಾ ವಾಕರ್ (Shraddha Walkar) ಹತ್ಯೆಯನ್ನು ನಾನೇ ಮಾಡಿದ್ದು. ಅವಳು ನನ್ನ ಬಿಟ್ಟು ಹೋಗುವ ಭೀತಿಯಲ್ಲಿ ಈ ಹತ್ಯೆ ನಡೆದುಹೋಗಿದೆ ಎಂದು ಅಫ್ತಾಬ್ ಅಮೀನ್ ಪೂನವಾಲಾ (Aftab) ತಪ್ಪೊಪ್ಪಿಕೊಂಡಿದ್ದಾನೆ. ಫಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡ ಬಳಿಕ ಈಗ ಮಂಪರು ಪರೀಕ್ಷೆಯಲ್ಲೂ (Narco Test) ಅಫ್ತಾಬ್ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ.
ಮುಂಬೈ ಮೂಲದ ಯುವತಿ ಶ್ರದ್ದಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು. ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆವರೆಗೂ ನಡೆದ ಪರೀಕ್ಷೆಯಲ್ಲಿ ಹತ್ಯೆಯ ಬಗೆಗಿನ ಹಲವು ಪ್ರಶ್ನೆಗಳಿಗೆ ಅಫ್ತಾಬ್ ಉತ್ತರಿಸಿದ್ದಾನೆ. ಇದನ್ನೂ ಓದಿ : – ಪಾರಿವಾಳ ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ಕರೆಂಟ್ ಶಾಕ್
ಹಣಕಾಸಿನ ವಿಚಾರಗಳಿಗೆ ನನ್ನ ಮತ್ತು ಶ್ರದ್ಧಾ ನಡುವೆ ಜಗಳಗಳಿತ್ತು. ದೆಹಲಿಗೆ ಬಂದ ಬಳಿಕ ಅವಳು ನನ್ನನ್ನು ಶಾಶ್ವತವಾಗಿ ಬಿಟ್ಟು ಹೋಗುವುದಾಗಿ ಹೇಳಿದಳು. ಡ್ರಗ್ಸ್ ಸೇವಿಸಿದ್ದ ನಾನು ನಶೆಯಲ್ಲಿ ಅವಳನ್ನು ಹತ್ಯೆ ಮಾಡಿದ್ದೇನೆ ಎಂದು ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ. ಶ್ರದ್ಧಾ ಹತ್ಯೆಯ ಬಳಿಕ ಅವಳ ಫೋನ್, ಬಟ್ಟೆ ಹಾಗೂ ದೇಹವನ್ನು ತುಂಡರಿಸಿದ ಗರಗಸವನ್ನು ಎಸೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಆದರೆ ಶ್ರದ್ದಾ ತಲೆಯನ್ನು ಎಲ್ಲಿ ಎಸೆಯಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ.
ಇದನ್ನೂ ಓದಿ : – 123 ಸೀಟ್ ಬಂದ್ರೆ ದಲಿತ ಮುಖ್ಯಮಂತ್ರಿ ಯಾಕೆ ಆಗ್ಬಾರದು ? – ಹೆಚ್.ಡಿ ಕುಮಾರಸ್ವಾಮಿ