ಜೂಜಿನ ಗೀಳಿ (Gambling addiction) ಗೆ ಬಲಿಯಾದ ಮಹಿಳೆ (Women) ಯೊಬ್ಬಳು ತನ್ನನ್ನು ತಾನೇ ಪಣಕ್ಕಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿರುವ ಘಟನೆ ಉತ್ತರ ಪ್ರದೇಶ (Uttar pradesh) ದಲ್ಲಿ ನಡೆದಿದೆ. ಜೂಜಾಟದ ದಾಸ್ಯಕ್ಕೆ ಬಿದ್ದ ಪಾಂಡವರು, ದ್ರೌಪದಿಯನ್ನು ಕೌರವರಿಗೆ ಪಣವಿಟ್ಟ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಅಂತೆಯೇ ಗಂಡಂದಿರುವ ತಮ್ಮ ಪತ್ನಿಯನ್ನು ಪಣಕ್ಕಿಟ್ಟು ಜೂಜಾಟ ಆಡಿರುವ ಸುದ್ದಿಗಳನ್ನೂ ಕೇಳಿದ್ದೇವೆ.
ಆದರೆ ಜೂಜಿನ ಗೀಳಿಗೆ ಬಿದ್ದ ಓರ್ವ ಮಹಿಳೆ ತನ್ನೆಲ್ಲಾ ಹಣ ಕಳೆದುಕೊಂಡು ಕೊನೆಗೆ ತನ್ನನ್ನೇ ತಾನು ಪಣಕ್ಕಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿದ್ದಾಳೆ. ಉತ್ತರ ಪ್ರದೇಶದ ಮಹಿಳೆಯೊಬ್ಬಳು ಜೂಜಾಟಕ್ಕೆ ತನ್ನನ್ನು ತಾನೇ ಪಣಕ್ಕಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿದ್ದಾಳೆ. ಲೂಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆಯೊಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿದ್ದಾಳೆ. ಇದೀಗ ಆಕೆಯ ಪತಿ (Husband) ತನ್ನ ಪತ್ನಿಯನ್ನು ತನಗೆ ಕೊಡಿಸುವಂತೆ ಗ್ರಾಮದ ಹಿರಿಯರಿಗೆ ಅಂಗಲಾಚುತ್ತಿದ್ದಾನೆ. 2 ಮಕ್ಕಳ ತಾಯಿ ರೇಣು ಸ್ಥಳೀಯ ನಿವಾಸಿಯಾಗಿದ್ದು, ಆಕೆಯ ಪತಿ ರಾಜಸ್ಥಾನದ ಜೈಪುರದಲ್ಲಿ ಕೆಲಸ ಮಾಡುತ್ತಿದ್ದ. ಪ್ರತೀ ತಿಂಗಳು ಆಕೆಗೆ ಹಣ ಕಳುಹಿಸುತ್ತಿದ್ದ. ಇದನ್ನೂ ಓದಿ : – ಚಿತಾವಣೆಗೆ ಹೆದರುವ ಮಗ ನಾನಲ್ಲ ! ಎಸ್.ಆರ್.ಶ್ರೀನಿವಾಸ್ ವಿರುದ್ಧ ಗುಡುಗಿದ ಹೆಚ್ಡಿಕೆ
ಆದರೆ ಲೂಡೋ ಗೀಳಿಗೆ ಬಿದ್ದ ಪತ್ನಿ ತನ್ನ ಪತಿ ಕಳುಹಿಸಿದ ಹಣವನ್ನೆಲ್ಲ ತನ್ನ ಭೂ ಮಾಲೀಕನೊಂದಿಗೆ ಲೂಡೋ ಆಡಲು ಬಳಸುತ್ತಿದ್ದಳು. ಪ್ರತಿನಿತ್ಯ ಇಬ್ಬರೂ ಬೆಟ್ಟಿಂಗ್ (Betting) ಕಟ್ಟಿಕೊಂಡು ಲೂಡೋ ಆಡುತ್ತಿದ್ದರು. ಹಿಂದಿನ ವಾರ ಆಟ ಆಡುತ್ತ ಈಕೆ ಪೂರ್ತಿ ಹಣ ಸೋತಿದ್ದಾಳೆ. ಬಳಿಕ ಆಟದಲ್ಲಿ ತನ್ನನ್ನೇ ತಾನು ಪಣಕ್ಕಿಟ್ಟುಕೊಂಡಿದ್ದಾಳೆ. ಜೂಜಿನಲ್ಲಿ ಸೋತು ಇದೀಗ ಆತನ ಪಾಲಾಗಿ ಆತನೊಂದಿಗೆ ನೆಲೆಸಿದ್ದಾಳೆ. ಪತ್ನಿಗಾಗಿ ಗಂಡ ಈಗ ಪೊಲೀಸ್ ಠಾಣೆ (Police station) ಮೆಟ್ಟಿಲೇರಿದ್ದಾನೆ.
ಇದನ್ನೂ ಓದಿ : – ಗುಬ್ಬಿಯಲ್ಲಿ ಹೆಚ್ಡಿಕೆಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ……