ಕೊರೊನಾ ವೈರಸ್ ವುಹಾನ್ ಲ್ಯಾಬ್ ನಿಂದಲೇ ಸೋರಿಕೆ ….!

ಕೊರೊನಾ ವೈರಸ್ ಮಾನವ ಸೃಷ್ಟಿ. ಚೀನಾದ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂದು ಅಲ್ಲಿಯೇ ಸಂಶೋಧನೆ ನಡೆಸಿದ್ದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕೊರೊನಾ ( CORONA ) ವೈರಸ್ ಮಾನವ ಸೃಷ್ಟಿ. ಚೀನಾದ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂದು ಅಲ್ಲಿಯೇ ಸಂಶೋಧನೆ ನಡೆಸಿದ್ದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ವುಹಾನ್ ಲ್ಯಾಬ್  ( WUHAN LAB ) ನಲ್ಲಿ ಚೀನಾ ನಡೆಸುತ್ತಿದ್ದ ವೈರಸ್ ಸಂಶೋಧನೆಗೆ ಅಮೆರಿಕ ಧನ ಸಹಾಯ ನೀಡಿತ್ತು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಡ್ರ್ಯೂ ಹಫ್ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ಸೃಷ್ಟಿಯಾದ ಬಳಿಕ ಹಲವು ವಿಜ್ಞಾನಿಗಳು, ಮಾಧ್ಯಮಗಳು ಈ ವೈರಸ್ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂದು ಹೇಳಿದ್ದರೂ ಚೀನಾ ಎಲ್ಲವನ್ನೂ ತಿರಸ್ಕರಿಸಿತ್ತು. ಆದರೆ ಆಂಡ್ರ್ಯೂ ಹಫ್ ಅವರ ದಿ ಟ್ರೂತ್ ಎಬೌಟ್ ವುಹಾನ್ ಪುಸ್ತಕದಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡಿದ್ದು ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ : –  ಕೊರಗಜ್ಜನ ಸಿನಿಮಾದಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ..!

ಚೀನಾ ಲ್ಯಾಬ್  ( CHINA LAB ) ಸರಿಯಾದ ನಿಯಂತ್ರಣ ಕ್ರಮಗಳನ್ನು ಹೊಂದಿರಲಿಲ್ಲ. ಸರಿಯಾದ ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳದ ಕಾರಣ ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ವೈರಸ್ ಸೋರಿಕೆಯಾಯಿತು. ಇದು ದೇಶಿಯವಾಗಿ ರೂಪುಗೊಂಡ ರೋಗದ ತಳಿ ಎನ್ನುವುದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು ಎಂದು ಬರೆದಿದ್ದಾರೆ.

ಇದನ್ನೂ ಓದಿ : –  ಹುಬ್ಬಳ್ಳಿಯಲ್ಲಿ ಉದ್ಯಮಿ ಭರತ್ ಜೈನ್ ಪುತ್ರ ಅಖಿಲ್ ಜೈನ್ ಶವ ಪತ್ತೆ….!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!