ತುಮಕೂರಿ (Tumkuru) ನ ಕೊರಟಗೆರೆ ಹಾಗೂ ಕುಣಿಗಲ್ (Kunigal) ತಾಲ್ಲೂಕಿನಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ (Jana sankalpa yatre) ನಡೆಯಲಿದೆ. ಕುಣಿಗಲ್ ನಲ್ಲಿ ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಕೊರಟಗೆರೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶ ನಡೆಯಲಿದೆ.
ಸಿಎಂ ಬೊಮ್ಮಾಯಿ (Bommai) , ನಳೀನ್ ಕುಮಾರ್ ಕಟೀಲ್ (Nalin kumar kateel) ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ. ನೆಲೆ ಇಲ್ಲದ ಕ್ಷೇತ್ರದಲ್ಲಿ ನೆಲೆಯೂರಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕೊರಟಗೆರೆ ಹಾಗೂ ಕುಣಿಗಲ್ ನಲ್ಲಿ ಬಿಜೆಪಿ ಇನ್ನೂ ಖಾತೆ ತೆಗೆದಿಲ್ಲ. ಈ ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಜನ ಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : – ನನ್ನ ಮುಲ್ಲಾ ಅಂತ ಕರೆಯೋಕ್ಕಾಗಲ್ಲ ಹಿಂದೂ ಹುಲಿ ಅಂತಾನೇ ಕರೆಯಬೇಕು – ಸಿ.ಟಿ ರವಿ