ತಮಿಳಿನ ಜನಪ್ರಿಯ ಜೋಡಿ ವಿಜಯ್ ( vijaya ) ಮತ್ತು ತ್ರಿಷಾ ( thrisha ) 14 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಸಹಜವಾಗಿಯೇ ಕಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿದ್ದ ಇವರು, ಕಾರಣಾಂತರಗಳಿಂದ ಮತ್ತೆ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಲೋಕೇಶ್ ಕನಕರಾಜ್ ಅವರು ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದರೆ. ಇದನ್ನು ಓದಿ : – ಸೀತೆಯಾಗಿ ಸಾಯಿ ಪಲ್ಲವಿ ಬಾಲಿವುಡ್ ಗೆ ಎಂಟ್ರಿ?
ವಿಜಯ್ ನಾಯಕ. ಈಗಾಗಲೇ ಸದ್ದಿಲ್ಲದೇ ಚೆನ್ನೈ ನಲ್ಲಿ ಸಿನಿಮಾ ಕೂಡ ಸೆಟ್ಟೇರಿದೆ. ಸದ್ಯಕ್ಕೆ ಈ ಸಿನಿಮಾಗೆ ದಳಪತಿ 67 ಎಂಬ ಹೆಸರಿನಲ್ಲಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟೈಟಲ್ ಅನ್ನು ಬಹಿರಂಗ ಪಡಿಸಲಿದ್ದಾರಂತೆ ಚಿತ್ರತಂಡ. ವಿಜಯ್ ಮತ್ತು ತ್ರಿಷಾ ನಟನೆಯ ಕೊನೆಯ ಸಿನಿಮಾ 2008 ರಲ್ಲಿ ರಿಲೀಸ್ ಆಗಿತ್ತು.
ಕುರುವಿ ಹೆಸರಿನ ಈ ಸಿನಿಮಾ ಬಾಕ್ಸ್ ಆಫೀಸಿ ನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಆದರೆ, ಜೋಡಿ ಮಾತ್ರ ಸಖತ್ತಾಗಿತ್ತು. ಯಾಕೆಂದರೆ ಈ ಹಿಂದೆ ಇದೇ ಜೋಡಿ ಗಿಲ್ಲಿ, ಆದಿ, ತಿರುಪಾಚ್ಚಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
View this post on Instagram
ಇದನ್ನು ಓದಿ : – KGF ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ. ರಾವ್ ನಿಧನ