ಸ್ಯಾಂಡಲ್ ವುಡ್ ( SANDALWOOD )ರೆಬಲ್ ಸ್ಟಾರ್ ಅಂಬರೀಶ್ ( AMBHARISH ) ಮತ್ತು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ( SUMALATHA AMBHARISH ) ಮದುವೆಯಾಗಿ ಇಂದಿಗೆ 31 ವರ್ಷ ಆಗಿದೆ.
View this post on Instagram
ನಟಿಯಾಗಿ ಪರಿಚಯವಾದ ಸುಮಲತಾ ಅವರನ್ನು ಪ್ರೀತಿಸಿ, ಅಂಬರೀಶ್ ಡಿಸೆಂಬರ್ 8 ರಂದು ಮದುವೆಯಾದರು. ಅಂಬರೀಶ್ ಜೊತೆಗಿನ ಕ್ಯೂಟ್ ಆಗಿರುವ ಫೋಟೋವನ್ನ ಹಂಚಿಕೊಂಡಿರುವ ಸುಮಲತಾ, ‘ನಿಮ್ಮೊಂದಿಗೆ ಹೆಜ್ಜೆ ಹಾಕಿದ ಆ ದಿನ, ಆ ಕ್ಷಣ ನಿತ್ಯವೂ ಹೊಸ ಪುಳಕ. ತುಳಿದ ಸಪ್ತಪದಿಯಲ್ಲೂ ನಿಮ್ಮದೇ ಗುಣಗಾನ. ನನ್ನ ಬದುಕಿಗೆ ಬಾಳ ಸಂಗಾತಿಯಾಗಿ ನೀವು ಬಂದ ದಿನದಿಂದಲೂ ನನ್ನೊಳಗೆ ಹೊಸ ಸಂಭ್ರಮ.
ಮದುವೆ ದಿನದ ಎಲ್ಲ ನೆನಪುಗಳ ಜೊತೆ ನೀವು ಇದ್ದೀರಿ, ಮತ್ತೆ ಮತ್ತೆ ಆ ದಿನವನ್ನು ನೆನಪಿಸುತ್ತೀರಿ. 31 ವರ್ಷಗಳಲ್ಲಿ ಜೀವಮಾನದ ನೆನಪುಗಳನ್ನು ಬಿತ್ತಿದ್ದೀರಿ. ನೀವು ನೀಡಿದ ಪ್ರೀತಿ ಮತ್ತು ಬಾಂಧವ್ಯದ ಕುರುಹುಗಳು ನನ್ನ ಜೀವಿತಾವಧಿಯ ಕೊಡುಗೆಗಳು. ಮತ್ತೆ ಮತ್ತೆ ಹೇಳುತ್ತೇನೆ. ಮದುವೆಯ ಈ ಬಂಧ, ಅನುರಾಗದ ಅನುಬಂಧ’ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ : – ಗುಜರಾತ್ ಚುನಾವಣಾ ಫಲಿತಾಂಶ ಹಿನ್ನೆಲೆ – ಬಿಜೆಪಿ ಕಚೇರಿ ಮುಂದೆ ರಾಜ್ ನ್ಯೂಸ್ ನೇರ ಪ್ರಸಾರ