ಬೆಳಗಾವಿಯಲ್ಲಿ ಮಹಾರಾಷ್ಟ್ರ ( MAHARASHTRA )ಸರ್ಕಾರದ ಬೆದರಿಕೆಗೆ ಬಗ್ಗಲ್ಲ ಎಂದು ಕನ್ನಡಿಗರು ಸವಾಲು ಹಾಕಿದ್ದಾರೆ. ಪಾಸಿಕೊಟ್ಟರು ನಮ ಹಕ್ಕಿಗಾಗಿ ಹೋರಾಟ ನಿಲ್ಲಿಸಲ್ಲ ಎಂದು ಮಹಾರಾಷ್ಟ್ರ ( MAHARASHTRA ) ಸರ್ಕಾರಕ್ಕೆ ಕನ್ನಡಿಗರು ಸವಾಲು ಹಾಕಿದ್ದಾರೆ. ಕರ್ನಾಟಕ (Karnataka) ಸೇರ್ಪಡೆ ಮಾಡಿ ಅಂತಾ 11 ಗ್ರಾಮ ಪಂಚಾಯತಿ (Panchayath) ಯಲ್ಲಿ ಠರಾವು ಹೊರಡಿಸಲಾಗಿದೆ. ಮಹಾರಾಷ್ಟ್ರ ಜತ್ತ, ಅಕ್ಕಲಕೋಟ ತಾಲೂಕಿನ ಗ್ರಾಮಗಳಿಂದ ಠರಾವು ಹೊರಡಿಸಲಾಗಿದೆ.
ಠರಾವು ಮಾಡಿದ ಪಂಚಾಯತಿ ಅಧ್ಯಕ್ಷರಿಗೆ, ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿದೆ. ಗ್ರಾಮ ಪಂಚಾಯತಿ ಚುನಾಯಿತ ಮಂಡಳಿಯನ್ನ ವಿಸರ್ಜನೆ ಮಾಡುವ ಬೆದರಿಕೆ ಹಾಕಲಾಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳನ್ನ ಅಮಾನತು ಮಾಡುವ ಬೆದರಿಕೆ ಹಾಕಲಾಗಿದೆ. ಮಹಾರಾಷ್ಟ್ರ ಸರ್ಕಾರದ ಬೆದರಿಕೆಗೆ ಜಗ್ಗದ ಕನ್ನಡಿಗರು ಅಭಿವೃದ್ಧಿ ಮಾಡದಿದ್ದರೆ ನಾವು ಕರ್ನಾಟಕಕ್ಕೆ ಹೋಗಿಯೇ ಹೋಗ್ತಿವಿ ಎಂದು ಸಂದೇಶ ರವಾನಿಸಿದ್ದಾರೆ. ನನ್ನ ಗಲ್ಲಿಗೇರಿಸಿದ್ರು ನಮ್ಮ ತೀರ್ಮಾನದಿಂದ ಹಿಂದೆ ಸರಿಯಲ್ಲ ಎಂದು ಆಳಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ ಹತ್ತೂರೆ ತಿಳಿಸಿದ್ದಾರೆ. ಇವರು ಸೊಲ್ಲಾಪುರ ಜಿಲ್ಲಾಧಿಕಾರಿ ಮತ್ತು ಕರ್ನಾಟಕ ಸಿಎಂಗೆ ಪತ್ರ ಬರೆದು ಕರ್ನಾಟಕ ಸೇರ್ಪಡೆ ಆಗುವ ನಿರ್ಧಾರ ತಿಳಿಸಿದ್ದರು. ಇದೀಗ ಕರ್ನಾಟಕ ಸೇರ್ಪಡೆ ಚಳುವಳಿ ಗಡಿನಾಡ ಕನ್ನಡಿಗರು ತೀವ್ರಗೊಳಿಸಿದ್ದಾರೆ.
ಇದನ್ನು ಓದಿ : – ಕನ್ನಡತಿ ಜೊತೆ ಸಲ್ಮಾನ್ ಖಾನ್ ಡೇಟಿಂಗ್- ತನಗಿಂತ 24 ವರ್ಷ ಕಿರಿಯ ನಟಿ ಜೊತೆ ಲವ್ ?