ಭಾರತ ಮತ್ತು ಚೀನಾ ಸೈನಿಕರ ನಡುವೆ ತವಾಂಗ್ ನ (Tawang sector) ಯಾಂಗ್ಟ್ಸೆ ಪ್ರದೇಶದಲ್ಲಿ ನಡೆದ ಘರ್ಷಣೆಯ ಕುರಿತು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸೈನಿಕರಿಗೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
No death, no major injuries to our soldiers: Rajnath Singh in Lok Sabha on India-China LAC clash
Read @ANI Story | https://t.co/a7WRLKVnGX#rajnathsingh #IndiaChinaClash #Parliament #ArunachalPradesh #Tawang pic.twitter.com/SPvdwiB2RG
— ANI Digital (@ani_digital) December 13, 2022
ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ ಎಂದು ತಿಳಿಸಿದರು. ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ ನಾಗರಿಕರು ಮತ್ತು ಸರ್ಕಾರ ಗೌರವಿಸುತ್ತದೆ ಎಂಬ ವಿಶ್ವಾಸವಿದೆ ಎಂದರು. ಇದನ್ನು ಓದಿ : – ಪಾನಿಪೂರಿ ಕಿಟ್ಟಿ ಮೇಲೆ FIR ದಾಖಲು – 4 ವರ್ಷದ ನಂತರ ಕೇಸ್ ಗೆ ಮರು ಜೀವ ನೀಡಿದ ದುನಿಯಾ ವಿಜಯ್
In this face-off, few soldiers on both sides suffered injuries. I'd like to tell this House that none of our soldiers died or suffered any serious injury. With timely intervention of Indian military commanders, PLA soldiers have retreated to their own location: Defence Min in RS pic.twitter.com/ep45luNZek
— ANI (@ANI) December 13, 2022
ಮುಖಾಮುಖಿ ಘರ್ಷಣೆಯಲ್ಲಿ ಎರಡೂ ಕಡೆಯ ಕೆಲವು ಸೈನಿಕರು ಗಾಯಗೊಂಡಿದ್ದಾರೆ. ನಮ್ಮ ಸೈನಿಕರಲ್ಲಿ ಯಾರೂ ಹುತಾತ್ಮರಾಗಿಲ್ಲ ಮತ್ತು ಗಂಭೀರ ಗಾಯವನ್ನು ಅನುಭವಿಸಿಲ್ಲ. ಭಾರತೀಯ ಸೇನಾ ಕಮಾಂಡರ್ಗಳ ಸಮಯೋಚಿತ ಮಧ್ಯಸ್ಥಿಕೆಯೊಂದಿಗೆ ಗಡಿ ವಾಸ್ತವ ರೇಖೆಯಿಂದ ಸದ್ಯ ಸೈನಿಕರು ಹಿಂದಕ್ಕೆ ಹೋಗಿದ್ದಾರೆ, ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು. ಈ ವಿಷಯವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಚರ್ಚಿಸಲಾಗುವುದು. ನಮ್ಮ ಸೇನಾಪಡೆ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಸಂಪೂರ್ಣವಾಗಿ ಬದ್ಧವಾಗಿವೆ. ಚೀನಾ ವಿರುದ್ಧ ಯಾವುದೇ ಪ್ರಯತ್ನವನ್ನು ತಡೆಯಲು ಯಾವಾಗಲೂ ಸಿದ್ಧವಾಗಿದೆ ಎಂದು ರಾಜ್ ನಾಥ್ ಸಿಂಗ್ ತಿಳಿಸಿದ್ರು.
ಇದನ್ನು ಓದಿ : – ಅರುಣಾಚಲ ಪ್ರದೇಶದಲ್ಲಿ ಯುದ್ಧ ವಿಮಾನ ಗಸ್ತು ನಡೆಸುತ್ತಿರುವ ಭಾರತೀಯ ವಾಯುಪಡೆ