ಬಿಹಾರ ( BIHAR ) ದಲ್ಲಿನ ಕಳ್ಳಬಟ್ಟಿ ದುರಂತದಲ್ಲಿನ ಸಾವಿನ ಪ್ರಕರಣಗಳ ಕುರಿತಂತೆ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರನ್ನು ‘ಕುಡುಕರು’ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ( NITHIN KUMAR ) ಕರೆದಿದ್ದಾರೆ. 2016 ರಿಂದಲೂ ಮದ್ಯ ನಿಷೇಧ ಮಾಡಿರುವ ರಾಜ್ಯದಲ್ಲಿ ಪದೇ ಪದೇ ಕಳ್ಳಬಟ್ಟಿ ದುರಂತ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿತ್ತು.
ಈ ವಿಚಾರವಾಗಿ ನಿತೀಶ್ ಕುಮಾರ್ ತಾಳ್ಮೆ ಕಳೆದುಕೊಂಡಿದ್ದಾರೆ. ಸರಣ್ ಜಿಲ್ಲೆಯ ಛಪ್ರಾ ಪ್ರದೇಶದಲ್ಲಿ ಅಕ್ರಮ ಮದ್ಯ ಸೇವಿಸಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕ ಎದುರಾಗಿದೆ. ಮದ್ಯ ನಿಷೇಧಿಸಿದ್ದರೂ ರಾಜ್ಯದಲ್ಲಿ ಅಕ್ರಮ ಮದ್ಯ ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಶಾಸಕರು ಸದನದಲ್ಲಿ ಘೋಷಣೆಗಳನ್ನು ಕೂಗಿದರು. “ಏನಾಗಿದೆ? ಸುಮ್ಮನಿರಿ. ಅವರನ್ನು ಸದನದಿಂದ ಹೊರಗೆ ಹಾಕಿ” ಎಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗರ ಮೇಲೆ ನಿತೀಶ್ ಕುಮಾರ್ ಹರಿಹಾಯ್ದಿದ್ದಾರೆ. ಇದನ್ನು ಓದಿ : – ದಲಿತ ಸಿಎಂ ಕೂಗು ಇವತ್ತಿಗೆ ಅಪ್ರಸುತ – ಡಾ.ಜಿ.ಪರಮೇಶ್ವರ್
“ನೀವು ಕುಡಿದು ಬಂದಿದ್ದೀರಿ” ಎಂದು ಕಿಡಿಕಾರಿದ್ದಾರೆ. ವಿಧಾನಸಭೆ ( VIDHAN SABHE ) ಕಟ್ಟಡದ ಹೊರಗೆ ಪೋಸ್ಟರ್ ಗಳನ್ನ ಹಿಡಿದು ನಿಂತ ಬಿಜೆಪಿ ಶಾಸಕರು, ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ನಿತೀಶ್ ಅವರನ್ನು ಆಗ್ರಹಿಸಿದ್ದರು. ಇದು ಮುಖ್ಯಮಂತ್ರಿಯನ್ನು ಕೆರಳಿಸಿತ್ತು. ‘ಮದ್ಯ ಕುಡಿದಿದ್ದೀರಿ’ ಎಂಬ ನಿತೀಶ್ ಹೇಳಿಕೆಯಿಂದ ಕುಪಿತಗೊಂಡ ಬಿಜೆಪಿ ಶಾಸಕರು ಮತ್ತೆ ಪ್ರತಿಭಟನೆ ನಡೆಸಿದರು.
ಇದನ್ನು ಓದಿ : – ಕಾಂಗ್ರೆಸ್ ಪಕ್ಷಕ್ಕೆ ಈ ಭಾರಿ ಗೆಲ್ಲುವ ಅವಕಾಶ ಇದೆ- ದಿನೇಶ್ ಗುಂಡೂರಾವ್