ಬಿಬಿಎಂಪಿಗೆ ಚುನಾವಣೆ (BBMP Election) ನಡೆಸುವ ವಿಚಾರಕ್ಕೆ ಸಂಬಂಧಿಸಿ ವಾರ್ಡ್ ಮರು ವಿಂಗಡಣೆ, ಮೀಸಲಾತಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್(Supreme Court) ಡೆಡ್ ಲೈನ್ ನೀಡಿದೆ. 2023ರ ಮಾರ್ಚ್ 31ರ ವರೆಗೆ ಗಡುವು ನೀಡಿ ನ್ಯಾ.ಅಬ್ದುಲ್ ನಜೀರ್, ನ್ಯಾ.ಹಿಮಾ ಕೊಹ್ಲಿ ಪೀಠ ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗದವರಿಗೆ ರಾಜಕೀಯ ಮೀಸಲಾತಿ ಸಂಬಂಧ ಆಯೋಗ ವರದಿ ನೀಡಬೇಕು. ಮಾ.31ರೊಳಗೆ ವರದಿ ನೀಡಿದ ಬಳಿಕವೇ ಬಿಬಿಎಂಪಿಗೆ ವಾರ್ಡ್ ವಾರು ಮೀಸಲಾತಿ ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ವಿಧಾನಸಭೆ ಚುನಾವಣೆ ನಂತರವೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಸೂಚಿಸಿರೋ ಸುಪ್ರೀಂಕೋರ್ಟ್ ವಾರ್ಡ್ ಮರುವಿಂಗಡಣೆ, ಮೀಸಲಾತಿ ಪರಿಷ್ಕರಣೆಗೆ 2023ರ ಮಾರ್ಚ್ 31ರ ಗಡುವು ನೀಡಿದೆ.
ಇದನ್ನು ಓದಿ : – ಬೆಂಗಳೂರಿನಲ್ಲಿ ನಕಲಿ ಡಾಕ್ಟರ್ ಎಡವಟ್ಟು – ಜ್ವರ ಎಂದು ಹೋದ ಮಹಿಳೆ ಕಾಲಿಗೆ ಗಂಡಾಂತರ