ಪಾಕಿಸ್ತಾನ Pakistan) ದ ಮಾಜಿ ಪ್ರಧಾನಿಯಾದ ಇಮ್ರಾನ್ ಖಾನ್ (Imran khan) ಮಾಜಿ ಪತ್ನಿ ರೆಹಮ್ ಖಾನ್ (Reham khan) ಮಾಡೆಲ್ ಮತ್ತು ನಟ ಮಿರ್ಜಾ ಬಿಲಾಲ್ ಬೇಗ್ ( Mirza Bilal Baig) ಅವರನ್ನು ಅಮೆರಿಕದಲ್ಲಿ ವಿವಾಹವಾಗಿದ್ದಾರೆ. ರೆಹಮ್ ಖಾನ್ ಗೆ 49 ಹಾಗೂ ಮಿರ್ಜಾ ಬಿಲಾಲ್ ಗೆ 36 ವಯಸ್ಸಾಗಿದೆ.
ಯುಎಸ್ (US) ಮೂಲದ ಮಾಡೆಲ್ ಮಿರ್ಜಾ ಬಿಲಾಲ್ ಬೇಗ್ ಅವರಿಗೂ ಇದು ಮೂರನೇ ವಿವಾಹವಾಗಿದೆ. 1993ರಲ್ಲಿ ಇಜಾಜ್ ರೆಹಮಾನ್ ಅವರೊಂದಿಗೆ ರೆಹಮ್ ವಿವಾಹವಾಗಿದ್ದರು. ನಂತರ 2015 ರಲ್ಲಿ ರೆಹಮ್ ಖಾನ್, ಇಮ್ರಾನ್ ಖಾನ್ ಅವರೊಂದಿಗೆ ಇಸ್ಲಾಮಾಬಾದ್ ಮನೆಯಲ್ಲಿ ವಿವಾಹ (Marraige) ವಾಗಿದ್ದರು. ಆದರೆ 10 ತಿಂಗಳ ನಂತರ ಅವರಿಗೆ ವಿಚ್ಛೇದನ ನೀಡಿದರು. ರೆಹಮ್ ಖಾನ್ 1973 ರಲ್ಲಿ ಲಿಬಿಯಾದ ಅಜ್ದಬಿಯಾದಲ್ಲಿ ಜನಿಸಿದರು. ಇದನ್ನು ಓದಿ :- ಸಿಕ್ಕಿಂ ನಲ್ಲಿ ಭಾರತೀಯ ಸೇನಾ ವಾಹನ ಅಪಘಾತ – 16 ಮಂದಿ ಯೋಧರು ಸಾವು
ಪಾಕಿಸ್ತಾನದಲ್ಲಿ ಅಧ್ಯಯನ ಮಾಡಿದ ನಂತರ, ಅವರು 90 ರ ದಶಕದ ಮಧ್ಯಭಾಗದಲ್ಲಿ BBC ಸೌತ್ ಟುಡೇ ಗೆ ಹವಾಮಾನ ನಿರೂಪಕಿಯಾಗಿ ಸೇರಿದಂತೆ ಬ್ರಿಟನ್ ನಲ್ಲಿ ಪ್ರಸಾರ ಪತ್ರಕರ್ತರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 2012 ರಲ್ಲಿ ಪಾಕಿಸ್ತಾನಕ್ಕೆ ತೆರಳಿದ ನಂತರ, ಡೈಲಿ ಪಾಕಿಸ್ತಾನದ ಪ್ರಕಾರ, ಸ್ಥಳೀಯ ಟಿವಿ ಕಾರ್ಯಕ್ರಮಕ್ಕಾಗಿ ಸಂದರ್ಶನ ಮಾಡುವಾಗ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿ ವಿವಾಹವಾಗಿದ್ರು.
ಇದನ್ನು ಓದಿ :- BMTC –KSRTC ಬಸ್ಸಿ ನಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್ ಕಡ್ಡಾಯ – ಮಾಸ್ಕ್ ಇಲ್ಲ ಅಂದ್ರೆ ನೋ ಎಂಟ್ರಿ