ಹೆದ್ದಾರಿಗಳಲ್ಲಿ ದರೋಡೆ ಮಾಡುತ್ತಿದ್ದ 4 ಕಳ್ಳರ ಗ್ಯಾಂಗ್ ನ್ನು ಹಾವೇರಿ (Haveri) ಯ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಂತೋನಿ, ಅಬ್ಬಾಸ್,ನಿಶಾದಬಾಬು ಹಾಗೂ ಭರತ್ ಕುಮಾರ (Bharath kumar) ಬಂಧಿತ ಆರೋಪಿಗಳಾಗಿದ್ದಾರೆ. ಪ್ರೆಸ್ ಲೋಗೊ ಹಾಗೂ ಆಂಜನೇಯಸ್ವಾಮಿ ಸ್ಟಿಕರ್ ಹಾಕಿ ಖದೀಮರು ದರೋಡೆ ಮಾಡುತ್ತಿದ್ದರು.
ಬಂಗಾರ (Gold) ವ್ಯಾಪಾರಿಗಳು ಹಾಗೂ ಉದ್ಯಮಿಗಳಿಂದ ಗ್ಯಾಂಗ್ ಹಣ ದೋಚುತ್ತಿದ್ದರು. ಕೇರಳ ರಾಜ್ಯ ಮೂಲದಿಂದ ಬಂದು ಹಾವೇರಿ, ಗದಗ, ಹುಬ್ಬಳ್ಳಿ, ದಾವಣಗೆರೆ (Davangere) ಮಾರ್ಗಗಳ ಮಧ್ಯೆ ಕಳ್ಳರು ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 34 ಲಕ್ಷ 50 ಸಾವಿರ ನಗದು, 6 ಲಕ್ಷ ಮೌಲ್ಯದ ಬೊಲೆನೊ ಕಾರು, 15 ಲಕ್ಷ ಮೌಲ್ಯದ ಕ್ರೆಟ್ಟಾ ಕಾರು, 15 ಲಕ್ಷ ಮೌಲ್ಯದ ಇನ್ನೊವಾ ಕಾರು, 29 ಲಕ್ಷ ಮೌಲ್ಯದ ಆಡಿ ಕಾರು, 6 ಲಕ್ಷ ಮೌಲ್ಯದ ಇಕೋ ಸ್ಪೋರ್ಟ್ಸ್ ಕಾರು ಹಾಗೂ ಏರ್ ಗನ್, ಲ್ಯಾಪ್ ಟ್ಯಾಪ್, ಡೊಂಗಲ್, ಮೊಬೈಲ್ ಗಳ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇದನ್ನು ಓದಿ :- ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿ …!
ಒಟ್ಟು ಬಂಧಿತ ದರೋಡೆಕೋರರಿಂದ 1,08,44,000 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ತನಿಖಾಧಿಕಾರಿ ಸಿದ್ದಾರೋಡ ಬಡಿಗೇರ ಶಿಗ್ಗಾಂವಿಯ ಬಂಕಾಪುರ ಬಳಿ NH4 ರಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಎಸ್ಪಿ ಹನುಮಂತರಾಯ್ ತನಿಖೆಯಲ್ಲಿ ಭಾಗಿಯಾದ ಎಲ್ಲಾ ಪೊಲೀಸರಿಗೂ ನಗದು ಬಹುಮಾನ ಘೋಷಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ :- ಧಾರವಾಡದಲ್ಲಿ ಮತ್ತೆ ಮೊಳಗಿದ ಮುಂದಿನ ಸಿಎಂ ಸಿದ್ದರಾಮಯ್ಯ ಘೋಷಣೆ