ರೌಡಿ ಶೀಟ್ (Rowdy sheet) ತೆರೆಯುವ ಮುನ್ನ ಅನುಸರಿಸಬೇಕಾದ ಮಾರ್ಗ ಸೂಚಿಯನ್ನ ಹೈಕೋರ್ಟ್ (High court) ರಿಲೀಸ್ ಮಾಡಿದೆ. ರೌಡಿಶೀಟ್ ತೆರೆಯುವ ಮುನ್ನ ನೋಟೀಸ್ ನೀಡಿ ಮಾಹಿತಿ ಕೊಡಬೇಕು. ರೌಡಿಶೀಟ್ ಹಾಕದಂತೆ ಮನವಿ ಸಲ್ಲಿಸಲು ಅವಕಾಶ ನೀಡಬೇಕು. ಎರಡು ವರ್ಷಕ್ಕೊಮ್ಮೆ ರೌಡಿಶೀಟ್ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು.
ರೌಡಿಶೀಟ್ ಬಗ್ಗೆ ಆಕ್ಷೇಪಗಳಿದ್ರೆ ಪೊಲೀಸ್ (Police) ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು. ರಾಕೇಶ್ ಮಲ್ಲಿ ಹಾಗು 19 ರೌಡಿಶೀಟರ್ ಗಳು ಹೈಕೋರ್ಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ರು. ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ರವರಿದ್ದ ಪೀಠ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಾಸಕಾಂಗ ರೌಡಿಶೀಟ್ ಹಾಕುವ ಬಗ್ಗೆ ವಿಸ್ತೃತ ಕಾನೂನು ರಚಿಸಬೇಕು . ಅಲ್ಲಿವರೆಗೆ ಪೊಲೀಸರು ಈ ಮಾರ್ಗ ಸೂಚಿ ಅನುಸರಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಇದನ್ನು ಓದಿ : – BREAKING ಪ್ರಧಾನಿ ಮೋದಿ ತಾಯಿ ಹೀರಾಬೆನ್ ಅಸ್ವಸ್ಥ – ಆಸ್ಪತ್ರೆಗೆ ದಾಖಲು