ನ್ಯಾ,ಸದಾಶಿವ ಮೂರ್ತಿ ಆಯೋಗ (Sadashiva murthy commission) ಜಾರಿಗೆ ತರಬೇಡಿ ಎಂದು ಲಂಬಾಣಿ ಸಮುದಾಯ (Lambani community) ದವರು ಹಾವೇರಿ (Haveri) ಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಬಂಜಾರ (Banjara) ,ಲಂಬಾಣಿ ಸಮುದಾಯ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿರೋ ಸಿಎಂ ಬೊಮ್ಮಾಯಿ ನಿವಾಸದ ಎದುರು ಸಾವಿರಾರು ಲಂಬಾಣಿ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದಾರೆ.
ಬಂಜಾರ,ಲಂಬಾಣಿ,ಸಮುದಾಯದ ನವನಗರ ಹುಬ್ಬಳ್ಳಿ (Hubballi) ಪೀಠಾಧ್ಯಕ್ಷರಾದ ತಿಪ್ಪೆರುದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಂಬಾಣಿ,ಬಂಜಾರ ಸಮುದಾಯದ ಜನರು ಆಗಮಿಸಿದ್ರು. ಕೊರವ,ಕೊರಚ,ಲಂಬಾಣಿ,ಹಾಗೂ ಹಲವು ಸಮುದಾಯದ ಜನರಿಗೆ ಅನ್ಯಾಯವಾಗಲಿದೆ. ಹೀಗಾಗಿ ನ್ಯಾ,ಸದಾಶಿವಮೂರ್ತಿ ಆಯೋಗ ಶಿಪಾರಸ್ಸು ಮಾಡಬೇಡಿ. ಇದರಿಂದ ನಮ್ಮ ಅನ್ನವನ್ನ,ಸೌಲಭ್ಯಗಳನ್ನ ಕಿತ್ತುಕೊಂಡ ಹಾಗೇ ಆಗುತ್ತದೆ. ಇಲ್ಲಿಯ ತನಕ ಯಾವ ಸಿಎಂ ಕೂಡಾ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.
ಇದನ್ನು ಓದಿ : – ಸಿಎಂ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ, ತೀವ್ರ ಸ್ವರೂಪಕ್ಕೆ ತಿರುಗಿದ ರೈತರ ಹೋರಾಟ