ಸಿಎಂ ಬೊಮ್ಮಾಯಿ ಸಿಕ್ಸ್ ಹೊಡೆದು ಮ್ಯಾಚ್ ಗೆಲ್ಲಿಸುತ್ತಾರೆಂಬ ನಂಬಿಕೆಯಿದೆ- ಜಯ ಮೃತ್ಯುಂಜಯ ಸ್ವಾಮಿಜಿ

ವಿರಾಟ್ ಪಂಚ ಶಕ್ತಿ ಸಮಾವೇಶದ ಕಾವು, ಪಂಚಮಸಾಲಿಗಳ ಒಡಲಿನ ಧ್ವನಿ ಸರ್ಕಾರಕ್ಕೆ ಮುಟ್ಟಿದೆ ಎಂದು ಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಸಿಎಂ ಒಂದು ವಾರಗಳ ಗಡುವು ಕೇಳಿದ್ರು. ಲಿಂಗಾಯತ ಪಂಚಮಸಾಲಿಗಳಿಗೆ ಇವತ್ತು ಪ್ರಮುಖ ದಿನ.

ವಿರಾಟ್ ಪಂಚ ಶಕ್ತಿ ಸಮಾವೇಶದ ಕಾವು, ಪಂಚಮಸಾಲಿಗಳ ಒಡಲಿನ ಧ್ವನಿ ಸರ್ಕಾರಕ್ಕೆ ಮುಟ್ಟಿದೆ ಎಂದು ಜಯ ಮೃತ್ಯುಂಜಯ ಸ್ವಾಮಿಜಿ (Jayamrutyunjaya swamiji) ಹೇಳಿದ್ದಾರೆ. ಬೆಳಗಾವಿ (Belagavi) ಯಲ್ಲಿ ಮಾತನಾಡಿದ ಅವರು ಸಿಎಂ ಒಂದು ವಾರಗಳ ಗಡುವು ಕೇಳಿದ್ರು. ಲಿಂಗಾಯತ ಪಂಚಮಸಾಲಿಗಳಿಗೆ ಇವತ್ತು ಪ್ರಮುಖ ದಿನ.

ಮಾಧ್ಯಮಗಳಲ್ಲಿ ನೋಡಿದ್ದೇನೆ ಮೀಸಲಾತಿಗೆ ವಿಘ್ನ ಉಂಟಾಗಿದೆ ಎಂಬ ವರದಿಗಳು ಬರ್ತಿವೆ. ಕೆಲವರೂ ಕಾನೂನು ಹೋರಾಟಕ್ಕಿಳಿದಿದ್ದಾರೆ ಎನ್ನಲಾಗ್ತಿದೆ. ನಮಗೂ ಅವರಿಗೂ ಸಂಬಂಧವಿಲ್ಲ. ನಮ್ಮ ಜೊತೆಯಲ್ಲಿ ಸಮಾಜದ ಜನತೆ ಭಗವಂತ ರೂಪದಲ್ಲಿ ಇದ್ದಾನೆ. ಸಚಿವ ಸಂಪುಟದ ಬಗ್ಗೆ ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡ್ತೇವೆ. ಸಂಜೆ ಐದು ಗಂಟೆಯವರೆಗೆ ಸಂಯಮದಿಂದ ಕಾಯ್ತೇವೆ. ಸಿಎಂ (bommai)  ಮೇಲೆ ನಂಬಿಕೆಯಿಂದಾಗಿ ಒಂದು ವಾರಗಳ ಗಡುವು ನೀಡಲಾಗಿದೆ. ನಮ್ಮ ನಂಬಿಕೆ ಉಳಿಸಿಕೊಳ್ತಾರೆ. ಯಾರೇ ಏನೇ ಮಾಡಲಿ ಅವರನ್ನು ನಾವು ಪ್ರಶ್ನೆ ಮಾಡಲ್ಲ. 2A ಮೀಸಲಾತಿಯಲ್ಲಿರುವ ಸಮುದಾಯಗಳಿಗೆ ಅನ್ಯಾಯವಾಗದಂತೆ ನಮಗೆ ಮೀಸಲಾತಿ ನೀಡಿ. ನಮ್ಮ ಗುರಿ ನಮ್ಮ ಮಕ್ಕಳ ಶಿಕ್ಷಣ ಉದ್ಯೋಗಕ್ಕಾಗಿ ಮೀಸಲಾತಿ (Reservation) ಬೇಕು. ಸಂಜೆಯವರೆಗೂ ಕಾಯುತ್ತೇವೆ. ಸಮಾಜ ಬಾಂಧವರು ಬೀದಿಗೆ ಬಂದು ಕಾನೂನು ಹೋರಾಟ ಮಾಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ರೋಶ ವ್ಯಕ್ತಪಡಿಸಬೇಡಿ ಎಂದು ಮನವಿ ಮಾಡಿಕೊಂಡ್ರು. ಸರ್ಕಾರ ಮೀಸಲಾತಿ ಮಾಡದಿದ್ದರೆ ಮುಂದಿನ ಹಾದಿ ಕುರಿತಂತೆ ಎರಡು ಸಲ ಮಾತುಕತೆ ಮಾಡಿದ್ದೇವೆ. ನಿನ್ನೆ ಸಂಜೆ ಸಮಾಜದ ಮುಖಂಡರು ಸಭೆ ಮಾಡಿದ್ದೇವೆ ಸಕಾರಾತ್ಮಕವಾಗಿದ್ದೇವೆ. ಸಂಜೆ ಐದು ಗಂಟೆಗೆ ಏನು ನಿರ್ಣಯ ಆಗುತ್ತೆ ಅನ್ನೋದನ್ನ ಕಾದು ನೋಡ್ತೇವೆ ಎಂದು ಹೇಳಿದರು. ಇದನ್ನು ಓದಿ : –  ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರಿಗೆ KSRTC ಮಾಸ್ಟರ್ ಸ್ಟ್ರೋಕ್

Karnataka Speaker | KR Ramesh Kumar: Karnataka Speaker, a jovial arbiter, finds himself in unfamiliar terrain

ರಮೇಶಕುಮಾರ್ ಹೇಳಿಕೆ ವಿಚಾರ
ರಮೇಶಕುಮಾರ್ (Ramesh kumar) ಉತ್ತರ ಕರ್ನಾಟಕದ ಕೆಲವಷ್ಟು ಮಂದಿನಾ ನೋಡಿದ್ದಾರೆ. ಅವರನ್ನು ನೋಡಿ ಎಲ್ಲರೂ ಶ್ರೀಮಂತರಿದ್ದಾರೆ ಅಂದುಕೊಂಡಿದ್ದಾರೆ. ನೀವೆಲ್ಲ ಪ್ರಬುದ್ಧ ರಾಜಕಾರಣಿ. ನಿಮ್ಮ ಸಮುದಾಯಕ್ಕೂ ಕೇಂದ್ರ ಸರ್ಕಾರ ಮೀಸಲಾತಿ ನೀಡಿದೆ. ಆವಾಗ ನಾವು ವಿರೋಧ ಮಾಡಿಲ್ಲ. ನೀವು ವ್ಯಂಗ್ಯವಾಗಿ ಮಾತನಾಡೋದನ್ನ ಸಮಾಜ ಖಂಡಿಸುತ್ತದೆ. ಸರ್ಕಾರಕ್ಕೆ ಲಾಸ್ಟ್ ವಿಕೆಟ್ ಇದೆ. ಲಾಸ್ಟ್ ಬಾಲ್ ಇದೆ. ಬೊಮ್ಮಾಯಿ ಸರ್ಕಾರ ಸಿಕ್ಸ್ ಹೊಡೆಯಲೇ ಬೇಕಾದ ಪರಿಸ್ಥಿತಿ ಇದೆ. ಸಿಎಂ ಬೊಮ್ಮಾಯಿ ಸಿಕ್ಸ್ ಹೊಡೆದು ಮ್ಯಾಚ್ ಗೆಲ್ಲಿಸುತ್ತಾರೆಂಬ ನಂಬಿಕೆ ನಮ್ಮ ಸಮುದಾಯಕ್ಕಿದೆ ಎಂದು ಜಯ ಮೃತ್ಯುಂಜಯ ಸ್ವಾಮಿಜಿ ತಿಳಿಸಿದ್ದಾರೆ.

ಇದನ್ನು ಓದಿ : – ಬಹು ದಿನಗಳ ಕನಸು ಕೊನೆಗೂ ನನಸಾಗಿದೆ- ಬಸವರಾಜ್ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!