2ಎ ಮೀಸಲಾತಿ (2A reservation) ನೀಡುವಂತೆ ರಾಜ್ಯ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯ (Panchamasalil community) ಆಗ್ರಹಿಸಿತ್ತು. 2022 ಡಿ. 29ರಂದು ಸಿಎಂ ಮೀಸಲಾತಿ ಘೋಷಣೆ ಮಾಡಿದ್ದರು. ಆದರೆ 2ಎ ಮೀಸಲಾತಿ ಬದಲಾಗಿ 2ಡಿ ರಚನೆ ಮಾಡಿ ಅದರಡಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆದರೆ ಸದ್ಯ ಈ ವಿಚಾರವಾಗಿ ವಿಜಯಪುರ ಜಿಲ್ಲೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava jayamrutyunjaya swamiji) ಮಾತನಾಡಿ, ಸಂಪುಟ ಸಭೆ ನೀಡಿದ 2ಡಿ ಮೀಸಲಾತಿಯನ್ನು ತಿರಸ್ಕಾರ ಮಾಡುತ್ತಿದ್ದೇವೆ ಎಂದು ಹೇಳಿದ್ರು. 24 ಗಂಟೆಯಲ್ಲಿ ಸಿಎಂ ಮೀಸಲಾತಿ ನೀಡ್ತಿರೋ ಇಲ್ವೋ ಹೇಳಬೇಕು. ಸಿಎಂ ಮಾತು ತಪ್ಪಿದ್ದಾರೆ ಎಂದು ಇಡೀ ಸಮಾಜದಲ್ಲಿ ಆಕ್ರೋಶ ಕಾಡ್ತಿದೆ. 2ಎಗೆ ಸರಿ ಸಮಾನವಾದ ಶಿಕ್ಷಣ, ಉದ್ಯೋಗದಲ್ಲಿ ಮತ್ತೊಂದು ಗ್ರೂಪ್ ಮಾಡಿ ಮೀಸಲಾತಿ ಕೊಡ್ತೀವಿ ಅಂದಿದ್ರಿ. ಎಲ್ಲವೂ ಗೊಂದಲ ಇರೋ ಕಾರಣ ಸಂಪುಟ ಸಭೆ ನಿರ್ಣಯವನ್ನು ತಿರಸ್ಕಾರ ಮಾಡುತ್ತಿದ್ದೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇದನ್ನು ಓದಿ : – Bengaluru-Mysuru Expressway ಫೆಬ್ರವರಿ ಅಂತ್ಯಕ್ಕೆ ಬೆಂಗಳೂರು-ಮೈಸೂರು ಎಕ್ಸಪ್ರೆಸ್ ಹೈವೇ ಉದ್ಘಾಟನೆ – ಗಡ್ಕರಿ