ಸ್ಮಶಾನ ಕಾರ್ಮಿಕರ ಜೊತೆಯಲ್ಲೇ ಕುಳಿತು ಸಿಎಂ ಬೊಮ್ಮಾಯಿ (Bommai ) ಉಪಹಾರ ಸೇವಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ (Kota srinivas poojari) , ಗೋವಿಂದ ಕಾರಜೋಳ ಹಾಗೂ ಆರಗ ಜ್ಞಾನೇಂದ್ರ (Araga jnanendra) ಸಾಥ್ ಕೊಟ್ಟಿದ್ದಾರೆ.
ಬೆಂಗಳೂರಿ (Bangalore) ನಲ್ಲಿ 117 ಸ್ಮಶಾನ ಕಾರ್ಮಿಕರನ್ನು ಸೇವೆಯಲ್ಲಿ ಖಾಯಂ ಮಾಡಲಾಗಿದೆ. ಉಳಿದ 100 ಜನರಿಗೆ ಖಾಯಂ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಬೊಮ್ಮಾಯಿ ಪ್ರಕಟಿಸಿದ್ದಾರೆ. ಇದನ್ನು ಓದಿ :- ಇಂದು ಬೆಳಗಾವಿಯಿಂದ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ
ಇಷ್ಟು ವರ್ಷ ಸ್ಮಶಾನ ಕಾರ್ಮಿಕರ ಕಷ್ಟಗಳನ್ನು ಯಾವ ಸರ್ಕಾರಗಳೂ ಆಲಿಸಿರಲಿಲ್ಲ. ಅವರ ನೋವಿಗೆ ಸ್ಪಂದಿಸಿರಲಿಲ್ಲ, ಬಿಜೆಪಿ ಸರ್ಕಾರ ಬಡವರು, ತುಳಿತಕ್ಕೊಳಗಾದವರ ಪರವಾಗಿರುತ್ತದೆ. ಸ್ಮಶಾನ ಕಾರ್ಮಿಕರನ್ನು ಹರಿಶ್ಚಂದ್ರ ಗೆಳೆಯರ ಬಳಗ ಎಂದು ಇನ್ನು ಮುಂದೆ ಕರೆಯಬೇಕು ಎಂದು ಅಲ್ಲಿಯೇ ಇದ್ದ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.
ಬಳಿಕ ಸ್ಮಶಾನ ಕಾರ್ಮಿಕರು ಸತ್ಯ ಹರಿಶ್ಚಂದ್ರ ಪ್ರತಿಮೆಯನ್ನು ನೀಡಿ ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡಿದರು. ಕಾರ್ಮಿಕರು ಕೊಟ್ಟಿರುವ ಸತ್ಯಹರಿಶ್ಚಂದ್ರ ಪ್ರತಿಮೆಯನ್ನು ನಾನು ದೇವರ ಮನೆಯಲ್ಲಿ ಇಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಇದನ್ನು ಓದಿ :- ರಾಜಕೀಯಕ್ಕೆ ಅಧಿಕೃತ ಎಂಟ್ರಿಯಾಗುತ್ತಾ ಆನಂದ್ ಸಿಂಗ್ ಕುಟುಂಬದ ಕುಡಿ..!