ಜನವರಿ 14 ರಂದು ಕಾಂಗ್ರೆಸ್ ( CONGRESS ) ಪಕ್ಷಕ್ಕೆ ಸೇರ್ಪಡೆ ಆಗುವೆ. ಈಗಾಗಲೇ ಜ.9 ರಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಧಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಕೋಲಾರ ಜಿಲ್ಲೆಯ ಮುಳಬಾಗಿಲು ಪಕ್ಷೇತರ ಶಾಸಕ H.ನಾಗೇಶ್ ( H. NAGESH ) ಹೇಳಿದ್ದಾರೆ.
ಕಾಂಗ್ರೆಸ್ ಹೈ ಕಮಾಂಡ್ ಎಲ್ಲಿ ಸ್ಪರ್ಧೆ ಮಾಡಿ ಅಂದರೂ ನಾನು ಸಿದ್ದನಿದ್ದೇನೆ. ಸದ್ಯಕ್ಕೆ ಬಿಜೆಪಿ ಸರ್ಕಾರದ ವಿರುದ್ದ ಏನೂ ಮಾತಾಡಲ್ಲ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ರಾಜೀನಾಮೆ ನೀಡಿರುವ ವಿಚಾರ ನಾನು ಯಾರೊಂದಿಗೂ ಚರ್ಚೆ ಮಾಡಿಲ್ಲ ಎಂದು ಹೇಳಿದ್ರು. ಇದನ್ನು ಓದಿ :- ಹುಬ್ಬಳ್ಳಿಗೆ ಬಂದಿಳಿದ ಮೋದಿ…!
ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಹೈ ಕಮಾಂಡ್ ಹೇಳೋವರೆಗೂ ಯಾವುದೇ ಅಂತಿಮವಿಲ್ಲ. ಇದು ಸಿದ್ದರಾಮಯ್ಯ ಹಾಗು ಎಲ್ಲರಿಗೂ ಅನ್ವಯಿಸುತ್ತೆ ಎಂದು ಹೇಳಿದ್ರು.
ಇದನ್ನು ಓದಿ :- ಗಣರಾಜೋತ್ಸವದ ಪರೇಡ್ ನಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಮಿತಿಯ ಅನುಮತಿ – ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ