ವಿಧಾನ ಪರಿಷತ್ಗೆ ಆಯ್ಕೆ ಮಾಡಿಲ್ಲವೆಂದು ಕಾಂಗ್ರೆಸ್ನ ಹಿರಿಯ ನಾಯಕ ಎಸ್.ಆರ್ ಪಾಟೀಲ್ ( S.R PATIL ) ಅಸಮಾಧಾನಗೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದರು.
ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದ ಅಂತರ ಕಾಯ್ದುಕೊಂಡಿದ್ದರು. ಕಾಂಗ್ರೆಸ್ನ ಹಿರಿಯ ನಾಯಕರು ಸಹ ಎಸ್.ಆರ್ ಪಾಟೀಲ್ ಅವರ ಮನವೊಲಿಸುವ ಕೆಲಸ ಮಾಡಿದ್ದರು. ಈ ಕುರಿತಾಗಿ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಮ್ಮ ನಡುವೆ ಯಾವುದೇ ಮುನಿಸು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ :- ಕರ್ನಾಟಕದಲ್ಲಿ 140 ಸ್ಥಾನಗಳನ್ನ ಗೆಲ್ಲಲಿದ್ದೇವೆ – ಬಿ.ಎಸ್ ಯಡಿಯೂರಪ್ಪ
ಸೃಷ್ಟಿ ಮಾಡೋದು ನೀವು. ನಾನು ಅವ್ರು ಒಂದು ಹತ್ತು ದಿನ ಭೇಟಿ ಆಗದೇ ಹೋದ್ರೆ, ಇವರಿಗೂ ಅವರಿಗೂ ಒಳಗಡೆ ಆಂತರಿಕ ಯುದ್ಧ ಇದೆ ಅಂತೀರಿ. ಯಾವ ಮುಸುಕಿನ ಗುದ್ದಾಟನೂ ಇಲ್ಲ, ಏನೂ ಇಲ್ಲ. ನಾವೆಲ್ಲರೂ ಒಂದು. ವಿ ಆರ್ ಆಲ್ ಯುನೈಟೆಡ್, ಮುಂದಿನ ಚುನಾವಣೆಯನ್ನು ಎಲ್ಲರೂ ಯುನೈಟೆಡ್ ಆಗಿ ಎದುರಿಸ್ತೇವೆ ಎಂದರು. ಈ ಮೂಲಕ ಎಸ್ಆರ್ ಪಾಟೀಲ್ ಹಾಗೂ ಸಿದ್ದು ನಡುವಿನ ಅಂತರಕ್ಕೆ ಬ್ರೇಕ್ ಬಿದ್ದಿದೆ.
ಇದನ್ನು ಓದಿ :- ಮಹಿಳಾ ಯೋಜನೆಗಳ ಬಗ್ಗೆ ಜಾಹಿರಾತು ಪ್ರಕಟಿಸಿದ ಬಿಜೆಪಿ ಸರ್ಕಾರ