13 ಬಜೆಟ್ (Budjet) ಮಂಡಿಸಿದವರಿಗೆ ಒಂದು ಕ್ಷೇತ್ರ ಹುಡುಕುವಂತಹ ಯೋಗ್ಯತೆ ಇಲ್ಲ. ಇನ್ನು ಕೋಲಾರ (Kolar) ಫೈನಲ್ ಹೌದೋ ಅಲ್ಲೋ ಅನ್ನೋ ಅನುಮಾನ ಇದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahalad joshi) ಹೇಳಿದ್ದಾರೆ. ಮುನಿಯಪ್ಪ ಬನ್ನಿ ನೋಡ್ಕೋತೀನಿ ಎಂದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು,13 ಬಾರಿ ಬಜೆಟ್ ಮಂಡಿಸಿದವರು. ನಿಮಗೆ ಒಂದು ಕ್ಷೇತ್ರ ಹುಡುಕಾಡೋ ಯೋಗ್ಯತೆ ಇಲ್ಲ.
ಸಿದ್ದರಾಮಯ್ಯರನ್ನ ಈ ಬಾರಿ 100 ಪರ್ಸೆಂಟ್ ಮನೆಗೆ ಕಳಿಸ್ತೀವಿ. ನೀವು ಬಾದಾಮಿ (Badami) ಯಲ್ಲಿ ಕೆಲಸ ಮಾಡಿಲ್ಲ, ಹಾಗಾಗಿ ಕೋಲಾರಕ್ಕೆ ಹೋಗ್ತಿದ್ದೀರಿ. ನಾವು ಅಚ್ಚರಿ ಅಭ್ಯರ್ಥಿ ಹಾಕಲ್ಲ, ಅಲ್ಲಿದ್ದವರನ್ನೇ ಅಭ್ಯರ್ಥಿ ಮಾಡ್ತೀವಿ. ಸಿದ್ದರಾಮಯ್ಯ ಬೇರೆ ಬೇರೆ ಕಡೆ ಪ್ರಚಾರ ಹೋಗಲಿ. ಜನ ಮೋದಿ ಅವರನ್ನ ಸ್ವೀಕಾರ ಮಾಡಿದ್ದಾರೆ. ಹುಬ್ಬಳ್ಳಿ, ಕಲಬುರಗಿ, ಯಾದಗಿರಿ ಕಾರ್ಯಕ್ರಮ ನೋಡಿ ಗಾಬರಿ ಆಗಿದ್ದಾರೆ. ಸಿದ್ದರಾಮಯ್ಯ ಮೊದಲು ಡಿ.ಕೆ ಶಿವಕುಮಾರ್ (Dk.shivakumar) ಜೊತೆ ಸೆಟಲ್ ಮಾಡಿಕೊಳ್ಳಲಿ. ಬಾದಾಮಿ ದೂರ ಇದೆ ಅನ್ನೋ ಕಾರಣ ಅಲ್ಲ, ನೀವು ಜನರೊಂದಿಗೆ ಸಂಪರ್ಕ ಇಲ್ಲ. ನನಗೂ ದೆಹಲಿ ದೂರ, ಆದ್ರೂ ನಾನು ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಬಾದಾಮಿಯಲ್ಲಿ ಸೋಲಿನ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ. ಅಲ್ಲೂ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನು ಓದಿ :- ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯೋದು ಪಕ್ಕಾ- ಖಾಸಗಿ ಸಂಸ್ಥೆಯ ಸಮೀಕ್ಷೆ