ಕೋಲಾರ( KOLAR ) ದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 74 ನೇ ಗಣರಾಜ್ಯೋತ್ಸವ ದಿನದ ಧ್ವಜಾರೋಹಣವನ್ನ ಉಸ್ತುವಾರಿ ಸಚಿವ ಮುನಿರತ್ನ (MUNIRATHNA) ನೆರವೇರಿಸಿದ್ರು. ಬಳಿಕ ತೆರೆದ ವಾಹನದಲ್ಲಿ ಪೆರೇಡ್ ತಂಡಗಳನ್ನ ವೀಕ್ಷಿಸಿ, ಪಥ ಸಂಚಲನ ತಂಡಗಳಿಂದ ಗೌರವ ವಂದನೆಯನ್ನ ಸ್ವೀಕರಿಸಿದರು, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ, ಸಂಸದ ಮುನಿಸ್ವಾಮಿ, ಎಮ್,ಎಲ್,ಸಿ ಗಳಾದ ಅನಿಲ್ ಕುಮಾರ್, ಗೋವಿಂದರಾಜು, ಡಿಸಿ,ಎಸ್ಪಿ ,ಸಿಇಒ ಭಾಗಿಯಾಗಿದ್ದರು.
ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಮುನಿರತ್ನ, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ನಮಗೆ ಯಾವುದೇ ಭಯವಿಲ್ಲ. ಯಾರು ಎಲ್ಲಿ ಬೇಕಾದ್ರು ಹೇಳಬಹುದು. ಆದ್ರೆ ಸ್ಪರ್ಧೆ ಮಾಡಿದಾಗ ಮಾತ್ರ ಗೊತ್ತಾಗುತ್ತೆ. ಜನ ತೀರ್ಪು ಇಲ್ಲಿ ಮುಖ್ಯ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ಕೊಡುತ್ತಿವೆ ಎಂದು ತಿಳಿಸಿದ್ರು. ಇದನ್ನು ಓದಿ :- ಮಂಡ್ಯದಲ್ಲಿ ಬಿಜೆಪಿಯವರಿಂದಲೇ ಅಶೋಕ್ ಗೆ ಭಾರೀ ವಿರೋಧ…!
ಇನ್ನು ಬೆಡ್ ರೂಂ ನಲ್ಲಿ ಚರ್ಚೆ ಮಾಡಿದ್ದಾರೆ, ಇವರೆಲ್ಲಾ ಮಹಾನ್ ಭ್ರಷ್ಟರು ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಮುನಿರತ್ನ, ನಮ್ಮನ್ನ ಭ್ರಷ್ಟರೆಂದು ಭ್ರಷ್ಟಾಚಾರಿಗಳೇ ಆರೋಪ ಮಾಡ್ತಾರೆ, ಬೇರೆ ಯಾರಾದರು ಆರೋಪ ಮಾಡಿದ್ದರೆ ಉತ್ತರ ಕೊಡಬಹುದಿತ್ತು ಎಂದು ವ್ಯಂಗ್ಯವಾಡಿದ್ರು, ಇನ್ನು 40 ಪರ್ಸೆಂಟ್ ಬಗ್ಗೆ ವೇದಿಕೆಯಲ್ಲಿ ಆರೋಪ ಮಾಡೊದಲ್ಲ, ಕೋರ್ಟ್ನಲ್ಲಿ ಮಾತಾಡಲಿ. ಆರೋಪ ಮಾಡಿದ್ದಕ್ಕೆ ಪ್ರಾಯಶ್ಚಿತ್ತ ಪಡೆಲೇಬೇಕು, ಅದು ಆಗೇ ಆಗುತ್ತೆ ಎಂದ ಮುನಿರತ್ನ ಅವ್ರು, ಸಚಿವ ಮುನಿರತ್ನ ಅವ್ರ ವಿರುದ್ದ ಕಮೀಷನ್ ಆರೋಪ ಮಾಡಿರುವ ಕೋಲಾರ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ್ಯ ಕೃಷ್ಣಾರೆಡ್ಡಿಯನ್ನ, ನೆನ್ನೆ ಸಚಿವ ಸುಧಾಕರ್ ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡಿರುವ ವಿಚಾರದ ಮಾಹಿತಿಯಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ರು.
ಇದನ್ನು ಓದಿ :- ಮೋದಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ – ಬಿ.ಕೆ ಹರಿಪ್ರಸಾದ್