2023ರ ವಿಧಾನಸಭಾ ಚುನಾವಣೆಗೆ ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಆಕಾಂಕ್ಷಿ ಭವಾನಿ ರೇವಣ್ಣ (BHAVANI REVANNA) ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.DKUMARASWAMY) ನಡುವಿನ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದೆ.
ಹಾಸನ (HASSAN) ಟಿಕೆಟ್ ಗೊಂದಲ ವಿಚಾರಕ್ಕೆ ದೊಡ್ಡಗೌಡರೇ ಎಂಟ್ರಿ ಕೊಟ್ಟಿದ್ದು, `ನಾನು ಹೇಳೋವರೆಗೂ ಯಾರೂ ಮಾತಾಡಬಾರದು, ಹಾಸನದಲ್ಲಿ ನಾನೇ ಎಲ್ಲಾ ನಿರ್ಧಾರ ಮಾಡ್ತೀನಿ’ ಎಂದು ಕುಟುಂಬದ ಎಲ್ಲರಿಗೂ ಬಹಿರಂಗವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್ ಆಗಿದ್ದಾರೆ. ಅದ್ರೆ ದೇವೇಗೌಡರ ವಾರ್ನಿಂಗ್ ಹಿಂದಿದೆ ಹಲವು ಲೆಕ್ಕಾಚಾರಗಳಿವೆ ಎನ್ನಲಾಗಿದೆ. ಇದನ್ನು ಓದಿ :- ಸಿಎಂ ಬೊಮ್ಮಾಯಿ ಹುಟ್ಟುಹಬ್ಬ ಹಿನ್ನಲೆ – ಶುಭಕೋರಿದ ಅಮಿತ್ ಶಾ, ಯಡಿಯೂರಪ್ಪ
ಕುಮಾರಸ್ವಾಮಿ ಪಂಚರತ್ನ (PANCHA RATHNA) ಯಾತ್ರೆ ಮಾಡಿ ಪಕ್ಷ ಬಲವರ್ಧನೆ ಮಾಡ್ತಿದ್ದಾರೆ. ಈಗ ಹಾಸನ ವಿಚಾರದಲ್ಲಿ ಗೊಂದಲ ಆದ್ರೆ ಕುಮಾರಸ್ವಾಮಿ ಪ್ರಚಾರಕ್ಕೆ ಅಡ್ಡಿ ಆಗುತ್ತದೆ. ಕುಟುಂಬದ ಸದಸ್ಯರೇ ಬೀದಿಯಲ್ಲಿ ಜಗಳ ಆಡಿದ್ರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಆತಂಕವೂ ಇದೆ. ಭವಾನಿ ರೇವಣ್ಣ ಬಹಿರಂಗವಾಗಿ ಟಿಕೆಟ್ ಬಗ್ಗೆ ಮಾತಾಡಿದ್ರೆ ಸ್ವರೂಪ್ ಮತ್ತು ಬೆಂಬಲಿಗರು ವಿರೋಧ ಆಗಬಹುದು. ಇದು ಹಾಸನದಲ್ಲಿ ಜೆಡಿಎಸ್ ಸೋಲಿಗೆ ಕಾರಣ ಆಗುತ್ತೆ. ಹೀಗಾಗಿ ಬಹಿರಂಗವಾಗಿ ಮಾತಾಡೋದು ನಿಲ್ಲಿಸಿ ಎಂದು ತಾಕೀತು ಮಾಡಿದ್ದಾರೆ.
ಇದನ್ನು ಓದಿ :- ಯಲಹಂಕ ವಲಯದಲ್ಲಿ ಜ.30 ರಿಂದ ಮಾಂಸ ಮಾರಾಟ ನಿಷೇಧ…!