ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ರಾಜಕೀಯ ಚಟುವಟಿಕೆ ಬಿರುಸುಗೊಳಿಸಿವೆ. ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್ನಲ್ಲಿ (JDS) ಟಿಕೆಟ್ ಹಂಚಿಕೆ ಗೊಂದಲಗಳು ಬಹಿರಂಗವಾಗುತ್ತಿದೆ.
ಜೆಡಿಎಸ್ ಅಭ್ಯರ್ಥಿಗೆ ಸುರಕ್ಷಿತ ಕ್ಷೇತ್ರ ಎನಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಟೆಕೆಟ್ ತನಗೇ ನೀಡಬೇಕು ಎಂದು ಭವಾನಿ ರೇವಣ್ಣ (Bhavani Revanna) ಪಟ್ಟುಹಿಡಿದಿದ್ದಾರೆ. ಆದರೆ ಭವಾನಿ ಅವರ ಬೇಡಿಕೆಯನ್ನು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಪಟ್ಟು ಬಿಡದ ಭವಾನಿ ಸಂಘಟನೆ ಚುರುಕುಗೊಳಿಸಿದ್ದು, ಮಗ ಸೂರಜ್ ಹಾಗೂ ಪತಿ ರೇವಣ್ಣ ಅವರೊಂದಿಗೆ ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ.
ಅರಕಲಗೂಡು ತಾಲ್ಲೂಕು ಹರದೂರು ಗ್ರಾಮದಲ್ಲಿ ಮಾತನಾಡಿದ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ತಾಯಿಗೆ ಟಿಕೆಟ್ ಕೊಡಬೇಕು ಎಂದು ಪ್ರತಿಪಾದಿಸಿದರು. ‘ಮೊದಲಿನಿಂದಲೂ ನಮ್ಮ ತಾತ (ಎಚ್.ಡಿ.ದೇವೇಗೌಡ) ಈ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು. ಈಗ ನನ್ನ ಪರಿಸ್ಥಿತಿ ತಗೊಳಿ. ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿದ್ದವು. ಆದರೆ ದೇವೇಗೌಡರು ಸೂರಜ್ ರೇವಣ್ಣ ಅಭ್ಯರ್ಥಿಯಾಗಬೇಕು ಎಂದು ತೀರ್ಮಾನಿಸಿದರು’ ಎಂದು ಹೇಳಿದ್ರು.
ಸಂಸದರ ಚುನಾವಣೆಯಲ್ಲಿ ದೇವೇಗೌಡರೇ ಸ್ಪರ್ಧಿಸಬೇಕಿತ್ತು. ಅವರೇ ಸ್ವಯಿಚ್ಛೆಯಿಂದ ಪ್ರಜ್ವಲ್ ರೇವಣ್ಣ ಅವರಿಗೆ ದಾರಿ ಮಾಡಿಕೊಟ್ಟರು. ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವ ಬಗ್ಗೆ ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು. ಸ್ವರೂಪ್ ಬೇರೆ ಅಲ್ಲ, ಎಚ್.ಎಸ್.ಪ್ರಕಾಶ್ ಬೇರೆ ಅಲ್ಲ. ಆ ಕುಟುಂಬಕ್ಕೂ ನಾಲ್ಕು ಬಾರಿ ಟಿಕೆಟ್ ಕೊಟ್ಟು ಶಾಸಕ ಸ್ಥಾನ ತಂದುಕೊಟ್ಟಿದ್ದೇವೆ. ಅವರು ಅಗಲಿದ ನಂತರ ಅವರ ಮಗನನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ, ಸಂಜೀವಿನಿ ಸಹಕಾರ ಆಸ್ಪತ್ರೆ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಸಾಕಷ್ಟು ರೀತಿಯಲ್ಲಿ ಅಧಿಕಾರ ಕೊಟ್ಟಿದ್ದೇವೆ. ನಮ್ಮಿಂದ ಯಾರಿಗೂ ಅನ್ಯಾಯವಾಗಿಲ್ಲ. ನಾವು ಯಾರನ್ನೂ ರಾಜಕೀಯವಾಗಿ ನಿರ್ಲಕ್ಷ್ಯ ಮಾಡಿಲ್ಲ’ ಎಂದು ಪ್ರತಿಪಾದಿಸಿದರು. ಇದನ್ನು ಓದಿ :- ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ಭಯ ಶುರುವಾಗಿದೆ – ಸಿದ್ದರಾಮಯ್ಯ
‘ಈಗ ಇಲ್ಲಿನ ರಾಜಕೀಯ ಸನ್ನಿವೇಶ ಬದಲಾಗಿದೆ. ಹಾಲಿ ಶಾಸಕರು ನಮ್ಮ ಕಾರ್ಯಕರ್ತರಿಗೆ ತೊಂದರೆ ಮಾಡುತ್ತಿದ್ದಾರೆ. ನಾವು ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಹಾಸನ ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಶಾಸಕರು ಆರಿಸಿಬರಬೇಕಿದೆ. ಇದು ನಿಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದು ಕಾರ್ಯಕರ್ತರು ಅಪೇಕ್ಷೆ ಎಂದು ಹೇಳಿದ್ರು.
ಇದನ್ನು ಓದಿ :- AirCraft Crash- ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ