ಬೆಂಗಳೂರಿ (Bangalore) ನಲ್ಲಿ ಪಂಚಮಸಾಲಿ (Panchamasali) ಲಿಂಗಾಯತ ಮೀಸಲಾತಿ ಹೋರಾಟ 15 ನೇ ದಿನಕ್ಕೆ ಕಾಲಿಟ್ಟಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ (Jayamrutyunjaya swamiji) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಇದೇ ವೇಳೆ ಇವತ್ತು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಅವರು ಭೇಟಿ ಮಾಡುತ್ತಿರೋ ಪ್ರದೇಶಗಳೆಲ್ಲ ಪಂಚಮಸಾಲಿ ಸಮುದಾಯವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ನಾವು ಪ್ರಧಾನಿಗಳು, ಗೃಹಸಚಿವರಿಗೆ ಹಾಗೂ ನಡ್ಡಾ ಅವರಿಗೆ ಪತ್ರ ಬರೆದಿದ್ದೇವೆ. ಸಿಎಂ ಬೊಮ್ಮಾಯಿ (Bommai) ಈಗಾಗಲೇ 6 ಬಾರಿ ಮಾತುಕೊಟ್ಟು ತಪ್ಪಿದ್ದಾರೆ. ಸಿಎಂ ಬೆಂಬಲ ಬೇಡ ಎಂದು ಕೇಂದ್ರ ಸರ್ಕಾರದ ಮೊರೆ ಹೋಗಿದ್ದೇವೆ. ನಂತರ ಪತ್ರ ಬರೆದಿದ್ವೀ, ಆ ಪತ್ರಕ್ಕೆ ಸಂಬಂಧಪಟ್ಟಂತೆ ಚರ್ಚೆಗಳು ಶುರುವಾಗಿವೆ. ಈ ಮೂಲಕ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಳ್ಳುತ್ತೇವೆ. ಬಿಜೆಪಿಗೆ ಶೇ. 80 ರಷ್ಟು ಬೆಂಬಲವನ್ನ ಈ ಸಮುದಾಯವೇ ನೀಡಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಬಗ್ಗೆ , ರಾಜ್ಯ ಬಿಜೆಪಿ ಮುಖಂಡರು ಹೋರಾಟದ ತೀವ್ರತೆಯ ಬಗ್ಗೆ, ಹೋರಾಟದ ಮುಂದಿನ ಪರಿಣಾಮದ ಬಗ್ಗೆ ನಿಮಗೆ ಮಾಹಿತಿ ಕೊಡಲು ವಿಫಲಗೊಂಡಿದ್ದಾರೆ ಅನಿಸುತ್ತೆ. ಇದನ್ನು ಓದಿ :- ಕಾಶ್ಮೀರದ ಅವಂತಿಪೋರಾದಿಂದ ಭಾರತ್ ಜೋಡೋ ಯಾತ್ರೆ ಪುನರಾರಂಭ…!
ಆದ್ದರಿಂದಲೇ ನಾವು ನೇರವಾಗಿ ನಿಮಗೆ ಪತ್ರ ಬರೆದಿದ್ದೇವೆ. ಪತ್ರದಲ್ಲಿ ಸಂಪೂರ್ಣವಾಗಿ ಉಲ್ಲೇಖ ಮಾಡಿದ್ದೇನೆ. ನಾವು ಕೇಳಿರೋದು 2ಎ ಮೀಸಲಾತಿ. 2ಎ ಮೀಸಲಾತಿಗೆ ಸಮನಾಗಿ ಎ ಯಿಂದ Z ವರೆಗೆ ಯಾವುದಾದರೂ ಒಂದು ಮೀಸಲಾತಿ ಕೊಡಿ . ಅಮಿತ್ ಶಾ (Amith shah) ಅವರು ಸಿಎಂ ಅವರಿಗೆ ಒತ್ತಡ ಹಾಕಿ ನಮಗೆ ಮೀಸಲಾತಿ ನೀಡಲು ತಿಳಿಸಬೇಕು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನು ಓದಿ :- ದೆಹಲಿಯ ಮೊಘಲ್ ಗಾರ್ಡನ್ ಇನ್ನು ಅಮೃತ ಉದ್ಯಾನ- ಹೆಸರು ಬದಲಾಯಿಸಿದ ಕೇಂದ್ರ