ನಾನು ಯಾರ ಬಗ್ಗೆಯೂ ಸವಾಲು ಹಾಕಲು ಹೋಗಲ್ಲ. ನನ್ನ ಕೆಲಸ ನನ್ನ ಸೇವೆ ಇಷ್ಟವಾಗಿದ್ರೆ ನನ್ನನ್ನು ಮತ್ತೆ ಗೆಲ್ಲಿಸ್ತಾರೆ ಎಂದು ಚಿಕ್ಕಬಳ್ಳಾಪುರ (CHIKKABALLAPURA) ದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K.SUDHAKAR) ಹೇಳಿದ್ದಾರೆ.
ಹಲವು ಭಾರಿ ಸೋತವರು ಮೊನ್ನೆ ಚಿಕ್ಕಬಳ್ಳಾಪುರದಲ್ಲಿ ಹೇಳಿ ಹೋಗಿದ್ದಾರೆ. ಅಂಥವರಿಂದ ನಾನು ಕಲಿಯಬೇಕಿಲ್ಲ. ಚಿಕ್ಕಬಳ್ಳಾಪುರಕ್ಕೆ ಯಾರೇ ಬಂದ್ರೂ ನಾನು ಹೆದರುವವನು ಅಲ್ಲ. ನನ್ನ ಜನರನ್ನು ನಂಬಿ ನಾನು ಚುನಾವಣೆ ಎದುರಿಸುತ್ತೇನೆ. ಚಿಕ್ಕಬಳ್ಳಾಫುರಕ್ಕೆ ಈ ಭಾರಿ ಚಿರತೆಯಾದ್ರು ಬರಲಿ. ಕೋತಿಯಾದ್ರೂ ಬರಲಿ, ಕತ್ತೆಯಾದರೂ ಬರಲಿ ನೋಡೋಣ. ಜನ ಯೋಗ್ಯ ವ್ಯಕ್ತಿಯನ್ನು ಬಯಸುತ್ತಾರೆ. ನಾನು ಮನಸಾಕ್ಷಿಯಾಗಿ ಕ್ಷೇತ್ರದ ಕೆಲಸ ಮಾಡಿದ್ದಾನೆ. ನಾನು ಸಮರ್ಪಕವಾಗಿ ಕೆಲಸ ಮಾಡಿಲ್ಲವಾದ್ರೆ ಮನೆಗೆ ಹೋಗ್ತಿನಿ ಅಷ್ಟೆ. ಜನರನ್ನು ನಂಬಿಕೊಂಡು ಜನ ಸೇವೆ ಮಾಡುವವನು ನಾನು ಎಂದು ಹೇಳಿದ್ರು. ಇದನ್ನು ಓದಿ :- ಗೋಡೆ ಬರಹ ಅಭಿಯಾನದಲ್ಲಿ ಭಾಗಿಯಾದ ಅಮಿತ್ ಶಾ…!
ಮಂಡ್ಯ (MANDYA)ಜಿಲ್ಲೆಯಲ್ಲಿ ಗೋಬ್ಯಾಕ್ ಅಶೋಕ್ ಅಭಿಯಾನ ಷಡ್ಯಂತ್ರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್, ಇದು ವಿಪಕ್ಷಗಳು ನಡೆಸಿರುವ ಕುತಂತ್ರ ಎಂದು ಹೇಳಿದರು. ಅಶೋಕ್ ಮಂಡ್ಯ ಜಿಲ್ಲೆ ಉಸ್ತುವಾರಿಯಾಗಿದ್ದಕ್ಕೆ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅವರು ಯಾವ ಜಿಲ್ಲೆಗೆ ಉಸ್ತುವಾರಿಯಾಗ್ತಾರೆ ಅಲ್ಲಿ ಬಿಜೆಪಿಗೆ ಲಾಭ ಆಗುತ್ತೆ. ಅಶೋಕ್ ನೇತೃತ್ವದಲ್ಲಿ ಮಂಡ್ಯದಲ್ಲಿ ನಾಲ್ಕೈದು ಕ್ಷೇತ್ರದಲ್ಲಿ ಗೆಲುವಾಗಿದೆ. ಈ ಬಾರಿ ಬಿಜೆಪಿ 4ರಿಂದ 5 ಸೀಟ್ ಗೆಲ್ಲುತ್ತೆ ಎಂದು ಅಶೋಕ್ ಪರ ಬ್ಯಾಟ್ ಬೀಸಿದರು.
ಇದನ್ನು ಓದಿ :- ತೆಲುಗು ನಟ ನಂದಮೂರಿ ತಾರಕ ರತ್ನ ಆರೋಗ್ಯ ಸ್ಥಿತಿ ಗಂಭೀರ