ಇಂದು ಕರ್ನಾಟಕ ರಾಜ್ಯ ಕ್ಷತ್ರಿಯ ಒಕ್ಕೂಟಗಳ ವತಿಯಿಂದ ಇಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ “ಬೃಹತ್ ಕ್ಷತ್ರೀಯ ಸಮಾವೇಶ”ವನ್ನು ಸಿಎಂ ಬೊಮ್ಮಾಯಿ (BASAVARJ BOMMAI) ಉದ್ಘಾಟಿಸಿದರು.
ಇಂದು ಕರ್ನಾಟಕ ರಾಜ್ಯ ಕ್ಷತ್ರೀಯ ಒಕ್ಕೂಟಗಳ ವತಿಯಿಂದ ಇಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ "ಬೃಹತ್ ಕ್ಷತ್ರೀಯ ಸಮಾವೇಶ"ವನ್ನು ಉದ್ಘಾಟಿಸಿ,ಮಾತನಾಡಿದೆನು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಕ್ಷತ್ರಿಯ ಸಂಘದ ಅಧ್ಯಕ್ಷ ಉದಯ್ ಸಿಂಗ್ ಹಾಗೂ ಸಮುದಾಯದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/fz6kah9dnZ
— Basavaraj S Bommai (@BSBommai) January 29, 2023
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಭಾರತದಲ್ಲಿ ಕ್ಷತ್ರಿಯ ಸಮುದಾಯ ಇಲ್ಲದಿದ್ದಿದ್ರೆ ದೇಶದಲ್ಲಿ ಒಗ್ಗಟ್ಟು ಇರ್ತಿರ್ಲಿಲ್ಲ. ನಾವೆಲ್ಲ ಒಂದು ಕಡೆ ಸೇರಿದಾಗಲೇ ನಮ್ಮ ಶಕ್ತಿ ಏನು ಅಂತ ಗೊತ್ತಾಗೋದು. ಕ್ಷತ್ರಿಯ ಸಮುದಾಯದ ಎಲ್ಲ 38 ಪಂಗಡಗಳೂ ಒಟ್ಟಾಗಿ ಸೇರಿರೋದು ಖುಷಿ ತಂದಿದೆ. ಕ್ಷತ್ರಿಯ ಸಮುದಾಯ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಸಮುದಾಯದ ಬೇಡಿಕೆಗಳನ್ನು ಆಧ್ಯತೆ ಮೇರೆಗೆ ಈಡೇರಿಸ್ತೇವೆ. ಬಜೆಟ್ ನಲ್ಲಿ ಕ್ಷತ್ರಿಯ ಸಮುದಾಯಕ್ಕೂ ಆರ್ಥಿಕ ನೆರವು ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ರು. ಇದನ್ನು ಓದಿ :- ಫೆ.3 ರಿಂದ ಕಾಂಗ್ರೆಸ್ ನಿಂದ ವಿಧಾನಸಭಾ ಕ್ಷೇತ್ರವಾರು ಪ್ರಜಾಧ್ವನಿ ಯಾತ್ರೆ
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, (ARUN SINGH) ರಾಜ್ಯ ಕ್ಷತ್ರಿಯ ಸಂಘದ ಅಧ್ಯಕ್ಷ ಉದಯ್ ಸಿಂಗ್ ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ಇದನ್ನು ಓದಿ :- ಮೂವರು ಮಕ್ಕಳ ಜೊತೆ ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ