‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದು ಸ್ಮಾರಕ ಉದ್ಘಾಟನೆ ಆಗಿದೆ. ಮೈಸೂರಿ(MYSURU)ನಲ್ಲಿ ಸಿಎಂ ಬೊಮ್ಮಾಯಿ (BASAVRAJ BOMMAI)ವಿಷ್ಣು ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು.
ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಸಮಾರಂಭ, ಮೈಸೂರು.#DrVishnuvardan https://t.co/xV9t1v8tl2
— Basavaraj S Bommai (@BSBommai) January 29, 2023
ಇಂದು ಮೈಸೂರಿನಲ್ಲಿ ನಡೆದ ವಿಷ್ಣು ಸ್ಮಾರಕ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ‘ವಿಷ್ಣುವರ್ಧನ್ ಅವರ ಕಲೆ, ಸಾಹಸ, ಚಿತ್ರರಂಗದಲ್ಲಿ ಮಾಡಿರೋ ಸಾಧನೆ ಕಣ್ಣ ಮುಂದೆ ಇದೆ. ನಾನು ಒಬ್ಬ ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ. 70 ರ ದಶಕದಲ್ಲಿ ನಾಗರಹಾವಿನ ಹೊಸ ನಾಯಕ, ಅವ್ರ ಚಿತ್ರ ಬಂದಿತ್ತು. ಮೊದಲ ಸಲಾ ನೋಡಿದವ್ರು ಖಂಡಿತವಾಗಿ ವಿಷ್ಣುವರ್ಧನ್ ಫ್ಯಾನ್ ಆಗ್ತಾ ಇದ್ದರು. ನಾಗರಹಾವು ಚಿತ್ರದ ಮೂಲಕ ನಾಡಿನ ಜನಮನ ಗೆದ್ದವರು ಡಾ. ವಿಷ್ಣುವರ್ಧನ್. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಸಾಹಸ ಸಿಂಹನಾಗಿ ಕರ್ನಾಟಕದಲ್ಲಿ ಮೆರೆದವರು’ ಎಂದು ಕೊಂಡಾಡಿದರು. ಕರ್ನಾಟಕ ರತ್ನ ಕುರಿತು ಪ್ರಸ್ತಾಪ ಮಾಡಿದರು. ಇದನ್ನು ಓದಿ :- ನನಗೆ 80 ವಯಸ್ಸಾಗ್ತಿದೆ ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ – ಬಿ.ಎಸ್ ಯಡಿಯೂರಪ್ಪ
ಇಂದು ಮೈಸೂರಿನಲ್ಲಿ ಅಭಿನಯ ಭಾರ್ಗವ, ಅಭಿಮಾನಿಗಳ ನೆಚ್ಚಿನ ಸಾಹಸ ಸಿಂಹ, ದಿವಂಗತ ನಟ ಡಾ.ವಿಷ್ಣುವರ್ಧನ್ ರವರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿ, ಮಾತನಾಡಿದೆನು. pic.twitter.com/RpNohQ9aZC
— Basavaraj S Bommai (@BSBommai) January 29, 2023
ನಿನ್ನೆಯಷ್ಟೇ ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ , ಸರಕಾರದ ವಿರುದ್ಧ ಹರಿಹಾಯ್ದಿದ್ದರು. ಬೇರೆ ನಟರಿಗೆ ಕೊಡುವ ಗೌರವವನ್ನು ವಿಷ್ಣುವರ್ಧನ್ ಅವರಿಗೆ ಯಾಕೆ ಕೊಡುತ್ತಿಲ್ಲವೆಂದು ಖಾರವಾಗಿಯೇ ಪ್ರಶ್ನೆ ಮಾಡಿದ್ದರು. ಅಲ್ಲದೇ, ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸುವಂತೆ ಆಗ್ರಹಿಸಿದ್ದರು. ವೀರಕಪುತ್ರ ಶ್ರೀನಿವಾಸ್ ಅವರ ಬೇಡಿಕೆಗೆ ಸ್ಪಂದಿಸಿರುವ ಸಿಎಂ, ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮಾತುಗಳನ್ನು ಆಡಿದ್ದಾರೆ.
ಇದನ್ನು ಓದಿ :- ಇತಿಹಾಸದಲ್ಲೇ ಮೊದಲ ಬಾರಿಗೆ ಬಿಎಂಟಿಸಿ ಚಾಲಕನಿಂದ ರಾಜ್ಯಪಾಲರಿಗೆ ಪತ್ರ…!