ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಶ್ರೀನಗರ(SRI NAGARA)ದಲ್ಲಿ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ಸಮಾರೋಪ ಸಮಾರಂಭ ನಡೆಯುತ್ತಿದ್ದು ಸುರಿಯುವ ಹಿಮರಾಶಿ ನಡುವೆ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (MALLIKARJUN KHARGE) ಅಭಿನಂದಿಸಿದ್ದಾರೆ.
LIVE: Public Meeting | Sher-e-Kashmir Stadium | Srinagar, J&K | #BharatJodoYatra https://t.co/f0PPgx0UM8
— Bharat Jodo (@bharatjodo) January 30, 2023
ಶಾಲು ಹೊದಿಸಿ, ಪರಸ್ಪರ ಆಲಿಂಗನ ಮೂಲಕ ಕಾಂಗ್ರೆಸ್ ಯುವರಾಜನನ್ನು ಖರ್ಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, (PRIYANKA GANDHI VADRA) ನನ್ನ ಸಹೋದರ ಕನ್ಯಾಕುಮಾರಿಯಿಂದ 4-5 ತಿಂಗಳು ನಡೆದಿದ್ದಾರೆ. ಅವರು ಹೋದಲ್ಲೆಲ್ಲಾ ಜನರು ಅವರಿಗಾಗಿ ಮುಗಿಬಿದ್ದರು. ಏಕೆಂದರೆ ಎಲ್ಲಾ ಭಾರತೀಯರ ಹೃದಯದಲ್ಲಿ ವೈವಿಧ್ಯತೆ ಇದೆ ಎಂದರು. ರಾಹುಲ್ ಗಾಂಧಿ ಕಾಶ್ಮೀರಕ್ಕೆ ಬಂದಾಗ, ವಿಶಿಷ್ಠ ಅನುಭವವಾಗಿರುವುದಾಗಿ ನನ್ನ ತಾಯಿ ಹಾಗೂ ನನಗೆ ಸಂದೇಶ ಕಳುಹಿಸಿದ್ದ. ಇದನ್ನು ಓದಿ :-ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಸರ್ವೆ- 10ಕ್ಕೂ ಹೆಚ್ಚು ಹಾಲಿ ಶಾಸಕರು ಸೋಲುವ ಭೀತಿ..!
कश्मीर की ज़मीं पर फहराया गया, एक विशाल तिरंगा। सबकी उम्मीद, विश्वास, प्रेम, एकता, जुड़ाव और बदलाव का साथी है ये परचम।#BharatJodoYatra pic.twitter.com/V3fU7N1Fdk
— Bharat Jodo (@bharatjodo) January 30, 2023
ತನ್ನ ಕುಟುಂಬ ಸದಸ್ಯರು ನನಗಾಗಿ ಕಾಯುತ್ತಿರುವುದಾಗಿ ಹೇಳಿದ ರಾಹುಲ್ , ಅವರು ಬಂದು ತಮ್ಮ ಕಣ್ಣುಗಳಲ್ಲಿ ಕಣ್ಣೀರಿನೊಂದಿಗೆ ತಬ್ಬಿಕೊಳ್ಳುತ್ತಾರೆ ಮತ್ತು ಅವರ ನೋವು ಮತ್ತು ಭಾವನೆಗಳು ಹೃದಯವನ್ನು ಪ್ರವೇಶಿಸುತ್ತಿವೆ ಎಂದು ತನ್ನ ಭಾವನೆಗಳನ್ನು ಹಂಚಿಕೊಂಡಿದ್ದಾಗಿ ತಿಳಿಸಿದರು. ವಿಭಜಿಸುವ ಮತ್ತು ಒಡೆಯುವ ರಾಜಕೀಯವು ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದೊಂದು ರೀತಿಯಲ್ಲಿ ಆಧ್ಯಾತ್ಮಿಕ ಯಾತ್ರೆಯೇ ಆಗಿತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ರು.
ಇದನ್ನು ಓದಿ :- ಕೋಲಾರದಲ್ಲಿ ಯತೀಂದ್ರ ಮುಂದೆ ವರ್ತೂರು ಪ್ರಕಾಶ್ ಗೆ ಗ್ರಾಮಸ್ಥನಿಂದ ಜೈಕಾರ