ವಿಷ ಸೇವಿಸಿ ಗೃಹಿಣಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿ (Bangalore) ನ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಧುರಿ (26) ಸಾವನ್ನಪ್ಪಿರುವ ಗೃಹಿಣಿ. ಮಾಧುರಿ (Madhuri) 2016 ರಲ್ಲಿ ಗುರುಪ್ರಸಾದ್ ಎಂಬಾತನನ್ನ ಮದುವೆಯಾಗಿದ್ದಳು. ಮದುವೆಯಾದ ಮೇಲೆ ಮಾಧುರಿಗೆ ಗುರುಪ್ರಸಾದ್ ಮನೆಯವರು ಕಿರುಕುಳ ನೀಡ್ತಿದ್ದರು.
ಕೆಮಿಕಲ್ ಎಕ್ಸಪೀರಿಮೆಂಟ್ ಗೆ ತಂದಿದ್ದ ಬಾಟಲಿಯನ್ನು ಮಾಧುರಿ ಕುಡಿದಿದ್ದಳು. ಕೂಡಲೇ ಮಾಧುರಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಾಧುರಿ ಸಾವನ್ನಪ್ಪಿದ್ದಾಳೆ. ಮಾಧುರಿ ಕುಟುಂಬಸ್ಥರಿಂದ ಪತಿ ಗುರುಪ್ರಸಾದ್ (Guruprasad) ಮತ್ತು ಕುಟುಂಬದವರ ವಿರುದ್ಧ ಕೊಲೆಯತ್ನ ಆರೋಪ ಮಾಡಲಾಗಿದೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ :- ಹೆಚ್. ವಿಶ್ವನಾಥ್ ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಿರುತ್ತಾರೆ – ಬೊಮ್ಮಾಯಿ