ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ 10 ದಿನದಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ರು. ಸಚಿವ ಹಾಲಪ್ಪ ಆಚಾರ್ (ALLAPA ACHAR) ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಭರವಸೆ ಬೆನ್ನಲ್ಲೇ 10 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಕೈಬಿಟ್ಟು ತಮ್ಮ ಮನೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ತೆರಳಿದ್ದಾರೆ.
ಸಚಿವರು ಹಾಲಪ್ಪ ಆಚಾರ್ ಮಾತನಾಡಿ, ಅಂದು ನಮ್ಮ ಅಧಿಕಾರಿಗಳನ್ನ ಕಳಿಸಿ ಅವರ ಬೇಡಿಕೆಗಳನ್ನ ಕೇಳುವಂತೆ ತಿಳಿಸಿದ್ದೆ. ಆದ್ರು ಅವರು 10 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ ಎಂದು ಖನಿಜ ಭವನದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ಅವರ ಒಂದು ಬೇಡಿಕೆ 10 ಗಂಟೆಯಿಂದ 1 ಗಂಟೆಯವರೆಗೆ ಶಿಕ್ಷಣಕ್ಕೆ ಮಾತ್ರ ಸಿಮೀತವಾಗಿರಬೇಕು. ಕಲಿಕೆಗೆ ತೊಂದರೆಯಾಗುತ್ತೆ ಅನ್ನೋ ದೃಷ್ಟಿಯಿಂದಾಗಿ ಶಾಲೆಯಲ್ಲಿ 10 ರಿಂದ 1 ಗಂಟೆಯವರೆಗೆ ಯಾರು ಬರಬಾರದು ಎಂದಿದ್ರು. ಅದಕ್ಕೆ ಸಂಬಂಧಪಟ್ಟಂತೆ ನಾವು ಆದೇಶ ಹೊರಡಿಸಿದ್ದೇವೆ. ಅಂಗನವಾಡಿ ಶಿಕ್ಷಕಿಗೆ ಪಿಯುಸಿ ಕಡ್ಡಾಯ, ಸಹಾಯಕಿಯರಿಗೆ 10 ನೇ ಕ್ಲಾಸ್ ಪಾಸ್ ಆಗಲೇಬೇಕು. ಹಳಬರಿಗೆ ಒಂದು ಬಾರಿ ಪ್ರಮೋಷನ್ ಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಿದ್ದೇವೆ. ಗ್ರ್ಯಾಚುಟಿ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ರು. ಇದನ್ನುಓದಿ :- ರಾಜ್ಯದಲ್ಲಿ ಇದುವರೆಗೂ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ – ಜಮೀರ್ ಅಹಮದ್
ನಾಳೆ ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಮಾಡುತ್ತೆ – CITU ಸಂಘದ ಅಧ್ಯಕ್ಷೆ ವರಲಕ್ಷ್ಮಿ
ನಮ್ಮ ಎಲ್ಲಾ ಬೇಡಿಕೆಗಳಿಗೂ ಹೆಚ್ಚು ಕಡಿಮೆ ಈಡೇರಿದೆ. 45 ವರ್ಷದ ಹೋರಾಟಕ್ಕೆ ಈ ಕ್ಷಣ ನಮಗೆ ಪ್ರತಿಫಲ ಸಿಕ್ಕಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ CITU ಸಂಘದ ಅಧ್ಯಕ್ಷೆ ವರಲಕ್ಷ್ಮಿ ಹೇಳಿದ್ದಾರೆ. ನಾಳೆ ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಮಾಡುತ್ತೆ ಅಂತ ಹೇಳಿದ್ದಾರೆ. ನಮ್ಮ ಹೋರಾಟಕ್ಕೆ ಸಿಕ್ಕ ಅತಿ ದೊಡ್ಡ ಜಯ ಇದು. ಅಂಗನವಾಡಿ ಮಕ್ಕಳಿಗೆ ದೃಢೀಕರಣ ಪತ್ರೆ ಕೊಡೋಕೂ ಸರ್ಕಾರ ಒಪ್ಪಿದೆ. ಅಂಗನವಾಡಿ ಕೇಂದ್ರದ ಮೂಲಕ ಅನೌಪಚಾರಿಕ ಶಿಕ್ಷಣ ಕೊಡೋಕು ಸರ್ಕಾರ ಒಪ್ಪಿದೆ ಎಂದು ವರಲಕ್ಷ್ಮಿ ತಿಳಿಸಿದ್ರು.
ಇದನ್ನುಓದಿ :- ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದೀವಿ ಅಂತಾರೆ – ಯಾಕೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ – ಡಿ.ಕೆ ಶಿವಕುಮಾರ್