ಮಾಜಿ ಸಚಿವ ಈಶ್ವರಪ್ಪ (Eshwarappa) ನವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಈಶ್ವರಪ್ಪನವರ ಜಾಗದಲ್ಲಿ ನಾನಿದ್ದರೂ ಅದನ್ನೇ ಹೇಳುತ್ತಿದ್ದೆ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ. ಟಿ. ರವಿ (CT.Ravi) ಹೇಳಿದ್ದಾರೆ. ಈಶ್ವರಪ್ಪ ಪಕ್ಷ ಕಟ್ಟಿದ ಹಿರಿಯ ನಾಯಕರಲ್ಲಿ ಒಬ್ಬರು. ಅಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.
ತನಿಖೆಯಲ್ಲಿ ಅವರ ಪಾತ್ರ ಇಲ್ಲವೆಂದು ಸಾಬೀತಾಗಿದೆ. ಈಗ ಅವರು ಮಂತ್ರಿ ಸ್ಥಾನ ಕೇಳೋದು ತಪ್ಪಲ್ಲ, ಅವರಿಗೆ ಕೊಡಬೇಕಿತ್ತು. ಅವರ ಗೌರವಕ್ಕೆ ಯಾವುದೇ ಕುಂದು ಉಂಟಾಗಲ್ಲ. ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಪಕ್ಷದ ಗೆಲುವಿನ ಬಗ್ಗೆ ಸಲಹೆ ನೀಡಿದ್ದಾರೆ. ಅವರು ಯಾವತ್ತೂ ನಮ್ಮ ಹಿರಿಯ ನಾಯಕರಲ್ಲಿ ಒಬ್ಬರು. ಅವರ ಗೌರವಕ್ಕೆ ಕುಂದು ಬರಲು ಅವಕಾಶ ನೀಡಲ್ಲ. ಅವರು ಮಂತ್ರಿ ಆಗಿದ್ದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿಯಲ್ಲಿ ನಾನೂ ಒಬ್ಬ ಎಂದು ಹೇಳಿದ್ರು.
ಇದೇ ವೇಳೆ ಸುಳ್ಳು ಯಾರು ಹೇಳುತ್ತಾರೆ ಎಂದು ಸಿದ್ದರಾಮಯ್ಯ (Siddaramaiah) ನವರಿಗೆ ಚೆನ್ನಾಗಿ ಗೊತ್ತು. ಚಿಕ್ಕಮಗಳೂರಿಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜು ರದ್ದು ಮಾಡಿದ್ರು.. ದತ್ತಪೀಠಕ್ಕೆ ಮೋಸ ಮಾಡಿದ್ರು. ಡಿಜೆಹಳ್ಳಿ-ಕೆಜೆಹಳ್ಳಿ ಗ್ಯಾಂಗಿಗೆ ಸಪೋರ್ಟ್ ಮಾಡಿದ್ದು ಕಾಂಗ್ರೆಸ್. ಎಸ್. ಡಿ. ಪಿ. ಐ ಮೇಲಿನ ಕೇಸ್ ಹಿಂಪಡೆದು, ನಾವಲ್ಲ ಅಂದವರು ಕಾಂಗ್ರೆಸ್. ಒಂದು ಸೀಟ್ ಬರಲ್ಲ ಅಂದಿದ್ರು, ಜನ ಎಂ.ಪಿ. ಎಲೆಕ್ಷನ್ ನಲ್ಲಿ 25 ಸ್ಥಾನ ಕೊಟ್ರು. ಅಪ್ಪನ ಆಣೆ ಬಿ.ಎಸ್.ವೈ. ಸಿಎಂ ಆಗಲ್ಲ ಅಂದ್ರು, ಬಿ.ಎಸ್.ವೈ. (Yediyurappa) ಸಿಎಂ ಆದ್ರು. ನಾನು ಪಕ್ಕಾ ಆರ್.ಎಸ್.ಎಸ್. ನೋ ಡೌಟ್. ಸಂಘ ಸಂಸ್ಕಾರ, ದೇಶಭಕ್ತಿ ಕಲಿಸುತ್ತೆ, ನಾನು ಸುಳ್ಳು ಹೇಳುವ ರಾಜಕಾರಣಿ ಅಲ್ಲ. ನಾವು ಏನು ಹೇಳ್ತೀವೋ ಅದನ್ನೇ ಮಾಡೋರು, ಏನ್ ಮಾಡ್ತೀವೋ ಅದನ್ನೇ ಹೇಳೋರು. ಪಾಕಿಸ್ತಾನದಲ್ಲಿ ಸರ್ವೆ ಮಾಡಿದರೆ 150 ಅಲ್ಲ, 200 ಸ್ಥಾನ ಬರಬಹುದು. ನಮ್ಮ ರಾಜ್ಯ-ದೇಶದಲ್ಲಿ ಬರಲ್ಲ, ಕಾಂಗ್ರೆಸ್ ಗೆ ಮತ ಹಾಕೋರ ಸಂಖ್ಯೆ ದಿನೇ-ದಿನೇ ಕಡಿಮೆ ಆಗ್ತಿದೆ. ಇಲ್ಲಿ ಕಾಂಗ್ರೆಸ್ ಡೆಪಾಸಿಟ್ ಉಳಿಸಿಕೊಳ್ಳೋದು ಕಷ್ಟ ಎಂಬಂತಾಗಿದೆ ಎಂದು ತಿಳಿಸಿದರು. ಇದನ್ನುಓದಿ :- ಕಾಂಗ್ರೆಸ್ ನಲ್ಲಿ ಈ ಬಾರಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ- ಪರಮೇಶ್ವರ್
ಇದೇ ವೇಳೆ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ದಲಿತ (Dalit) ರಿಗೆ ಕಾಂಗ್ರೆಸ್ ಮೋಸ ಮಾಡ್ತು. ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ಪರಮೇಶ್ವರ್ ಹಾಗೂ ಮುನಿಯಪ್ಪರನ್ನ ಸೋಲಿಸಿದ್ದು ಯಾರು ಕಾಂಗ್ರೆಸ್ಸಿಗರೇ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ಇದು ಬಹಿರಂಗ ಸತ್ಯ. ನಾನೇ ಸೋಲಿಸಿದ್ದು… ನಾನೇ ಸೋಲಿಸಿದ್ದು… ಅನ್ನೋದು ಸಿದ್ದು ಎದೆಯೊಳಗಿಂದ ಕೇಳಿಸುತ್ತದೆ. ಪರಮೇಶ್ವರ್ ಸೋಲಿಸಲು ಹಫ್ತಾ ಯಾರಿಗೆ ಕೊಟ್ಟಿದ್ದು, ಅವರೇ ಹೊರಗಡೆ ಹೇಳಿದ್ದಾರೆ. ಸಂಕಟವನ್ನ ಎಷ್ಟು ದಿನ ಒಳಗಡೆ ಇಟ್ಟುಕೊಳ್ಳಲು ಆಗುತ್ತೆ ಸ್ಪೋಟ ಆಗಲೇಬೇಕು, ಈಗ ಆಗುತ್ತಿದೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಇದನ್ನುಓದಿ :- ರಾಷ್ಟ್ರ ಪ್ರಶಸ್ತಿ, ಪದ್ಮಭೂಷಣ ವಿಜೇತೆ, ಹಿರಿಯ ಗಾಯಕಿ ವಾಣಿ ಜೈರಾಮ್ ನಿಧನ