ಮಾಜಿ ಸಚಿವ ವಿನಯ ಕುಲಕರ್ಣಿ (Vinay kulkarni) ಪತ್ನಿ ಶಿವಲೀಲಾ ಕುಲಕರ್ಣಿ (Shivaleela kulkarni) ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರ ಜೊತೆ ಸಭೆ ನಡೆಸಿದ್ದಾರೆ. ಧಾರವಾಡದ ಗಾಯಕವಾಡ ಕಲ್ಯಾಣ ಮಂಟಪದಲ್ಲಿ ಶಿವಲೀಲಾ ಕುಲಕರ್ಣಿ ಸಭೆ ಮಾಡಿದ್ದಾರೆ.
ಯೋಗೇಶ್ ಗೌಡ ಕೊಲೆ ಕೇಸ್ ನಿಂದ ವಿನಯ ಕುಲಕರ್ಣಿ ಜಿಲ್ಲೆಗೆ ಅವಕಾಶ ಸಿಗಲಿಲ್ಲ. ಸದ್ಯ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗಲೆ ಕಾರ್ಯಕರ್ತರ ಜೊತೆ ಶಿವಲೀಲಾ ಕುಲಕರ್ಣಿ ಸಭೆ ನಡೆಸಿದ್ದಾರೆ. ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಶಿವಲೀಲಾ ಕುಲಕರ್ಣಿ ವಹಿಸಿದ್ದರು. ಇದನ್ನುಓದಿ :- ಬೆಂಗಳೂರಿಗೆ ನರೇಂದ್ರ ಮೋದಿ ಆಗಮನ – ರಸ್ತೆಗಳಲ್ಲಿ ಸಂಚಾರಕ್ಕೆ ನಿಷೇಧ
ಇದೇ ವೇಳೆ ವಿನಯ ಕುಲಕರ್ಣಿ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳ ಬಗ್ಗೆ ಸಮಾಲೋಚನೆ ಮಾಡುವುದು ಅವರು ಮಾಡಿರುವ ಕೆಲಸಗಳ ಬಗ್ಗೆ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಸದಸ್ಯರ ಜೊತೆ ಸಮಾಲೋಚನೆ ಮಾಡುತ್ತಿದ್ದೇನೆ ಎಂದು ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದ್ದಾರೆ. ಈ ಭಾರಿ ಚುನಾವಣೆಗೆ ವಿನಯ ಕುಲಕರ್ಣಿ ಅವರು ಸ್ಪರ್ಧೆ ಮಾಡುತ್ತಾರೆ. ಗೆದ್ದ ಸೋತವರ ಅಭ್ಯರ್ಥಿಗಳ ಜೊತೆ ಸಭೆ ಮಾಡುತ್ತಿದ್ದೇನೆ.
ಮುಂಬರುವ ಚುನಾವಣೆಯ ಸಮಾಲೋಚನೆ ಸಭೆ ಮಾಡುತ್ತಿದ್ದೇನೆ. ಸಲೀಂ ಅಹ್ಮದ್ (Salim ahamed) ಅವರು ಸಭೆಗೆ ಬರಬೇಕಿತ್ತು ಆದರೆ ಅವರು ಕಾರಣಾಂತರದಿಂದ ಬರಲಿಲ್ಲ. ಗ್ರಾಮೀಣ ಕ್ಷೇತ್ರದಿಂದ ಅಭ್ಯರ್ಥಿ, ಯಾರು ಎಂದು ಇನ್ನು ಡಿಕ್ಲೆರ್ ಆಗಿಲ್ಲ. ವಿನಯ ಕುಲಕರ್ಣಿ ಅವರು ಬಂದೆ ಬರ್ತಾರೆ ಅವರೆ ನಿಲ್ತಾರೆ. ಈ ಬಾರಿ ಟಿಕೆಟ್ ಅವರಿಗೆ ಅನ್ನೋದು ನಂಬಿಕೆ ಇದೆ. ನಾವು ಕಾನೂನಿನ ತೊಡಕನ್ನ ಎದುರಿಸುತ್ತಿದ್ದೇವೆ. ಕೋರ್ಟ ಮುಖಾಂತರ ಅನೂಕೂಲವಾಗುತ್ತೆ ಅವರು ಬಂದೆ ಬರ್ತಾರೆ ಕೋರ್ಟ್ ಅನೂಲ್ ಮಾಡೇ ಮಾಡುತ್ತೆ ಎಂದು ನಂಬಿಕೆ ಇದೆ. ಈ ಭಾರಿ 2023 ರ ವಿಧಾನಸಭೆ ಚುಣಾವಣೆಗೆ ವಿನಯ ಕುಲಕರ್ಣಿ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಶಿವಲೀಲಾ ಕುಲಕರ್ಣಿ ತಿಳಿಸಿದ್ದಾರೆ.
ಇದನ್ನುಓದಿ :- ಇಂದು ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ