ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್’ ಎಂದು ವಿಜಯನಗರ (Vijayanagara) ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿ ಇರುವ ಐತಿಹಾಸಿಕ ದೊಡ್ಡ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ (Goravayya koteppa) ದೈವವಾಣಿ ನುಡಿದಿದ್ದಾರೆ. ಮೈಲಾರ ಪುಣ್ಯಕ್ಷೇತ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪ್ರಸಕ್ತ ವರ್ಷದ ಕಾರ್ಣಿಕ ಶುಭ ಸಂದೇಶ ನೀಡಿದೆ. ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿದೆ ಎಂದು ಭಕ್ತರು ಕಾರ್ಣಿಕ ನುಡಿಯನ್ನು ಅರ್ಥೈಸಿಕೊಂಡಿದ್ದಾರೆ.
ಹರಪನಹಳ್ಳಿ ದೊಡ್ಡ ಮೈಲಾರ ಲಿಂಗೇಶ್ವರ ಪುಣ್ಯ ಕ್ಷೇತ್ರ ಅಂದ್ರೆ ಪವಿತ್ರ ಕ್ಷೇತ್ರ. ಇಲ್ಲಿ ವರ್ಷಕ್ಕೊಮ್ಮೆ ಸುತ್ತಮುತ್ತ ಊರಿನ ಸಾವಿರಾರು ಜನ ಸೇರುತ್ತಾರೆ. ಕಾರ್ಣಿಕೋತ್ಸವ (Karnikotsava) ದಲ್ಲಿ ಗೊರವಯ್ಯ ಕೋಟೆಪ್ಪ ನುಡಿದ ದೈವವಾಣಿ ಇಲ್ಲಿನ ಜನಕ್ಕೆ ವೇದ ವಾಕ್ಯ. ಇಡೀ ವರ್ಷ ಆ ವಾಣಿ ಸತ್ಯವಾಗುತ್ತದೆಯಂತೆ. ಹೀಗಾಗಿ ದೇವವಾಣಿಗಾಗಿ ಪುಣ್ಯಕ್ಷೇತ್ರ ಅಂಗಳದಲ್ಲಿ ವಿಶಾಲ ಪ್ರದೇಶದಲ್ಲಿ ಗೊರವಯ್ಯ ಬರುತ್ತಿದ್ದಂತೆ ಏಳು ಕೋಟಿ ಏಳುಕೋಟಿ ಅಂತಾ ಘೋಷಣೆಗಳು ಮೊಳಗುತ್ತದೆ. ಇದಾದ ಮೇಲೆ ಇಡೀ ಜನಸ್ಥೋಮ ಶಾಂತವಾಗುತ್ತದೆ. ಸೂಜಿ ಬಿದ್ದರು ಸಹ ಸದ್ದಾಗುವ ರೀತಿಯಲ್ಲಿ ಇಲ್ಲಿ ಶಾಂತಿ ನೆಲೆಸುತ್ತದೆ.
ಈ ಸಲ ಭಾಗ್ಯದ ನಿಧಿ ತುಂಬಿ ತುಳಕಿತಲೇ ಪರಾಕ್ ಎಂಬ ದೇವ ವಾಣಿ ಆಗಿದೆ. ಪ್ರಸಕ್ತ ವರ್ಷದ ಕಾರ್ಣಿಕ ಶುಭ ಸಂದೇಶ ನೀಡಿದೆ. ಈ ವರ್ಷದ ಉತ್ತಮ ಮಳೆ ಬೆಳೆಯಾಗಲಿದೆ ಎಂದು ಸೇರಿದ್ದ ಭಕ್ತರು ಅರ್ಥೈಸಿಕೊಂಡರು. ಇದನ್ನುಓದಿ :- ಹಿರಿಯ ಗಾಯಕಿ ವಾಣಿ ಜಯರಾಮ್ ಸಾವಿಗೆ ಕಾರಣ ಬಹಿರಂಗ
ಪುಣ್ಯಕ್ಷೇತ್ರದ ಅಂಗಳ (Angala) ದಲ್ಲಿ ಏಳುಕೋಟಿ ಏಳು ಕೋಟಿ ಎನ್ನುತ್ತಲೇ ಭಕ್ತ ಸಮೂಹ ಕಾರ್ಣಿಕ ಸ್ವಾಗತಿಸಿದ್ರು. ಒಮ್ಮೊಮ್ಮೆ ಭಕ್ತರು ಅರ್ಥೈಸುವ ರೀತಿ ಬದಲಾಗಬಹುದು. ಆದ್ರೆ ದೇವ ವಾಣಿ ಮಾತ್ರ ಸತ್ಯವಾಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ.
ಇದನ್ನುಓದಿ :- ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡ್ತಾ ಬಂದಿದೆ – ಡಿ. ಕೆ ಶಿವಕುಮಾರ್