Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

BSY ಪುತ್ರನನ್ನ ಮಂತ್ರಿ ಮಾಡಬೇಕಂತಲೇ ಸಂಪುಟ ವಿಸ್ತರಣೆ ಮಾಡ್ತಿಲ್ಲ – ಸಿದ್ಧರಾಮಯ್ಯ ಹೊಸ ಬಾಂಬ್

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ 10 ಕೆಜಿ ಅಕ್ಕಿ ಕೊಡಲು ಆದೇಶಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ 10 ಕೆಜಿ ಅಕ್ಕಿ (Rice) ಕೊಡಲು ಆದೇಶಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಕಲಬುರ್ಗಿ (Kalburgi) ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಜನರ ರಕ್ತ ಕುಡಿಯಲು ಆರಂಭಿಸಿದೆ.

Rice Exports: After wheat and sugar, govt may curb rice exports - The  Economic Times

ದೇಶದ ಇತಿಹಾಸದಲ್ಲಿ ಇಷ್ಟೊಂದು ಸುಳ್ಳು ಹೇಳಿದವರು ಯಾರೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಷ್ಟೊಂದು ಸುಳ್ಳು ಹೇಳುತ್ತಿದ್ದಾರೆ. ಮೂಗಿಗೆ ತುಪ್ಪ ಹಚ್ಚುತ್ತಾರೆಂದು ಕೇಳಿದ್ದೆ, ಹಣೆಗೆ ತುಪ್ಪ ಹಚ್ಚುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು. ಸಿದ್ದರಾಮಯ್ಯ ಭಾಷಣ ವೇಳೆ ಕರೆಂಟ್ ಕೈಕೊಟ್ಟಿದೆ. ವಿದ್ಯುತ್ ಇಲ್ಲದೆ ಭಾಷಣ ಮಾಡಲಾಗದೆ ಸಿದ್ದರಾಮಯ್ಯ ಪರದಾಡಿದ್ದಾರೆ. ಜನರೇಟರ್ ಹಾಕಿಸಿಕೊಂಡು ಭಾಷಣ ಆರಂಭಿಸಿದ ಸಿದ್ದರಾಮಯ್ಯ, ನಾನು ಭಾಷಣ ಆರಂಭಿಸಿದಾಗಲೇ ಕರೆಂಟ್ ತೆಗೆಸಿದ್ದಾರೆ. ಬಿಜೆಪಿ (BJP) ಮನೆಹಾಳರು ಕರೆಂಟ್ ತೆಗೆಸಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಮೋದಿ ಬರ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ, ನಾವು ಅಡುಗೆ ಮಾಡಿದ್ದೇವೆ, ಅವರು ಬಡಿಸಲು ಬರುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿಯೇ ಬಂಡವಾಳ.

Son will contest from my seat': Former Karnataka CM BS Yediyurappa hints at  hanging boots | Bengaluru News - Times of India

ಹೀಗಾಗಿ ಬಿಜೆಪಿಯವರು ಮೋದಿ ಅನ್ನೋ ಗುಮ್ಮನನ್ನು ತೋರಿಸ್ತಿದ್ದಾರೆ. ರಾಜ್ಯಕ್ಕೆ ಮೋದಿ ಬರುವುದರಿಂದ ಬಿಜೆಪಿಗೆ ಯಾವುದೇ ಲಾಭ ಆಗಲ್ಲ. BSY ಪುತ್ರನನ್ನ ಮಂತ್ರಿ ಮಾಡಬೇಕಂತಲೇ ಸಂಪುಟ ವಿಸ್ತರಣೆ ಮಾಡ್ತಿಲ್ಲ. ಎಲ್ಲಾ ಇಲಾಖೆಗಳನ್ನು ಸಿಎಂ ಬೊಮ್ಮಾಯಿ ಅವರೇ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ರು. ಇದನ್ನೂ ಓದಿ : –  ಬೆಳಗಾವಿ ಮೇಯರ್ ಚುನಾವಣೆ- ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ರಣತಂತ್ರ

H D Kumaraswamy claims RSS conspiring to make Pralhad Joshi Karnataka CM,  targets lineage | Bengaluru News - Times of India

ಬ್ರಾಹ್ಮಣರನ್ನು ಸಿಎಂ ಮಾಡಲು ಆರ್ಎಸ್ಎಸ್ ನಿರ್ಧಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ (Kumaraswamy) ಎಲ್ಲಾ ಮಾತುಗಳನ್ನು ನಾನು ಒಪ್ಪೋದಿಲ್ಲಾ. ಆದ್ರೆ ಯಾರನ್ನು ಸಿಎಂ ಮಾಡಬೇಕು ಅಂತ ಆರ್ಎಸ್ಎಸ್ನವರೇ ನಿರ್ಧಾರ ಮಾಡ್ತಾರೆ. ಆದ್ರೆ ಈ ಭಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲಾ ಎಂದು ಹೇಳಿದರು.

ಇದನ್ನೂ ಓದಿ : – ಮೋದಿಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಹಾಫ್ ಕೋಟ್ ಉಡುಗೊರೆ ನೀಡಿದ ಇಂಡಿಯನ್ ಆಯಿಲ್ ಕಂಪನಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!