ನಾನು ಹಿಂದೂ (Hindu) ಅಂದಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು ಎಂದು ಮಂತ್ರಾಲಯ (Mantralaya) ಶ್ರೀ ರಾಘವೇಂದ್ರ ಮಠ (Raghavendra mutt) ದ ಸುಬುಧೇಂದ್ರ ತೀರ್ಥ ಸ್ವಾಮೀಜಿ (Subudendra teertha swamiji) ಹೇಳಿದ್ದಾರೆ. ನಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವ, ಮನುವಾದದ ವಿರೋಧಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸ್ವಾಮೀಜಿ, ಸಿದ್ದರಾಮಯ್ಯ ಅವರ ದ್ವಂದ್ವ ಹೇಳಿಕೆಯಲ್ಲಿ ಅರ್ಥವಿಲ್ಲ.
ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಭೇದ ಇರಬಹುದು. ಆದರೆ ನಾನು ಹಿಂದೂ ಅಂದಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು. ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ಹೀಗಾಗಿ ಹಿಂದೂಗಳೆಲ್ಲರೂ ಹಿಂದುತ್ವವನ್ನು ಗೌರವಿಸಲೇಬೇಕು ಎಂದರು. ಯಾವ ಹಿನ್ನಲೆಯಲ್ಲಿ ಸಿದ್ದರಾಮಯ್ಯ (Siddaramaiah) ಅವರು ಆ ಭಾವನೆಯನ್ನ ಹೇಳುತ್ತಾರೆ ಗೊತ್ತಿಲ್ಲ. ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಬೇಧ ಇರಬಹುದು. ಆದರೆ ಹಿಂದೂಗಳೆಲ್ಲರೂ ಹಿಂದುತ್ವವನ್ನ ಆಧರಿಸಲೇಬೇಕು. ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ನನ್ನ ತಾಯಿ ಅನ್ನೋದು, ಅವಳು ನಿಸ್ಸಾಂತಾನ ಉಳ್ಳುವಳು ಅನ್ನೋದು ಎಷ್ಟು ಅಪಹಾಸ್ಯ. ತಾಯಿ ಅಂದಮೇಲೆ ಅವಳಿಗೆ ಸಂತಾನ ನೀನು ಅಂತಾ ಆಯಿತಲ್ವಾ? ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಶ್ರೀಗಳು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : – ಬಿಜೆಪಿ ಹಿನ್ನೆಲೆ ಆರೋಪ- ಸುಪ್ರೀಂನಲ್ಲಿ ಅರ್ಜಿ ವಜಾ, ಜಡ್ಜ್ ಆಗಿ ಗೌರಿ ಪ್ರಮಾಣವಚನ