Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಅದೃಷ್ಟಕ್ಕಾಗಿ ಪಕ್ಷದ ಚಿಹ್ನೆಯನ್ನೇ ಬದಲಿಸಿದ್ರಾ ಡಿಕೆಶಿ? ಚರ್ಚೆಗೆ ಗ್ರಾಸವಾದ ಹಸ್ತದ ಗುರುತು

ಡಿ.ಕೆ. ಶಿವಕುಮಾರ್ ಪ್ರಜಾಧ್ವನಿ ಯಾತ್ರೆಯಲ್ಲಿ ಬಳಸಲಾಗಿರುವ ಕಾಂಗ್ರೆಸ್ ಹಸ್ತದ ಗುರುತಿನಲ್ಲಿ ಕೊಂಚ ಬದಲಾವಣೆ ಕಂಡು ಬಂದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಡಿ.ಕೆ. ಶಿವಕುಮಾರ್ (DK.Shivakumar) ಪ್ರಜಾಧ್ವನಿ ಯಾತ್ರೆ (Prajadhwani yatre) ಯಲ್ಲಿ ಬಳಸಲಾಗಿರುವ ಕಾಂಗ್ರೆಸ್ (Congress)  ಹಸ್ತದ ಗುರುತಿನಲ್ಲಿ ಕೊಂಚ ಬದಲಾವಣೆ ಕಂಡು ಬಂದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅದೃಷ್ಟದ ಮೊರೆ ಹೋದ್ರಾ? ತಮ್ಮ ರಾಜಕೀಯ ಒಳಿತಿಗಾಗಿ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಈ ರೀತಿ ಬದಲಾವಣೆ ಮಾಡಿಸಿದ್ರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

1980 ರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಚಿಹ್ನೆಯಾಗಿ ಹಸ್ತದ ಗುರುತನ್ನು (Congress Logo) ರಚನೆ ಮಾಡಿ ಚಾಲ್ತಿಗೆ ತರಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಯಾರೊಬ್ಬರೂ ಕೂಡ ಹಸ್ತದ ಗುರುತನ್ನು ಬದಲು ಮಾಡಲು ಮುಂದಾಗಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಅದೃಷ್ಟದ ಕಾರಣಕ್ಕೆ ಹಸ್ತದ ಗುರುತಿನಲ್ಲಿ ರೇಖೆಯನ್ನೇ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ನ ಹಸ್ತದಲ್ಲಿ ಗುರುತಿನಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆಯಲಾಗಿದೆ. ಇದನ್ನೂ ಓದಿ : –  ಹಿಂದೂ ಆದವ ಹಿಂದುತ್ವ ಗೌರವಿಸಲೇಬೇಕು- ಸಿದ್ದರಾಮಯ್ಯ ಹೇಳಿಕೆಗೆ ಸುಬುಧೇಂದ್ರ ತೀರ್ಥ ಶ್ರೀ ತಿರುಗೇಟು

ಕಾಂಗ್ರೆಸ್ ಸಿಂಬಲ್ ಹಸ್ತದ ಗುರುತು ಆಗಿತ್ತು, ಆ ಹಸ್ತದ ಗುರುತಿನಲ್ಲಿ ಮೂರು ಗೆರೆಗಳಿದ್ದವು. ಮೂರು ಗೆರೆಗಳು ಸರಿಯಲ್ಲ ಎಂದು ಸಂಖ್ಯಾಶಾಸ್ತ್ರಜ್ಙರ ಸಲಹೆ ನೀಡಿದ್ದು, ಸಮ ಸಂಖ್ಯೆ ಗೆರೆಗಳನ್ನ ಬಳಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಸಂಖ್ಯಾಶಾಸ್ತ್ರಜ್ಙರ ಸಲಹೆಯ ಮೇರೆಗೆ ಗೆರೆಗಳು ಚೇಂಜ್ ಆಗಿದ್ದು, ಮೂರು ಗೆರೆಗಳ ಮಧ್ಯೆ ಅಡ್ಡ ಗೆರೆ ಎಳೆದ ಸಿಂಬಲ್ ಬಳಕೆ ಮಾಡಿದ್ದಾರೆ. ಹಸ್ತಕ್ಕೆ ನಾಲ್ಕನೆ ಗೆರೆಯು ಅದೃಷ್ಟ ಮತ್ತು ಲಕ್ಷ್ಮೀ ,ಲಕ್ಕಿ ಎಂಬುದನ್ನು ಸೂಚಿಸುತ್ತದೆ. ಸದ್ಯ ಡಿಕೆಶಿ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ ಈ ಚಿಹ್ನೆ ಬಳಕೆಯಾಗುತ್ತಿದೆ. ಇತ್ತ ಸಿದ್ದರಾಮಯ್ಯ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಹಳೆಯ ಹಸ್ತದ ಗುರುತನ್ನೇ ಬಳಸಲಾಗುತ್ತಿದೆ.

ಇದನ್ನೂ ಓದಿ : –  ಕುಮಾರಸ್ವಾಮಿ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳೋದು ಅವಶ್ಯಕತೆ ಇಲ್ಲ – ಸಿ ಸಿ ಪಾಟೀಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!