ಚಳಿಗಾಲ ಶುರುವಾಯ್ತಂದ್ರೆ ಸಾಕು ಬೆಂಗಳೂರಿ ನಾನಾ ಭಾಗಗಳಲ್ಲಿ ಅದರಲ್ಲೂ ಕಬ್ಬನ್ ಪಾರ್ಕ್ನಲ್ಲಿಹೂಗಳ ಲೋಕವೇ ಸೃಷ್ಟಿಯಾಗಿ ಬಿಡುತ್ತೆ.
ಮಾಗಿಯ ಚುಮು ಚುಮು ಚಳಿಗೆ ಅಮೆರಿಕಾ ಮೂಲದ ಪಿಂಕ್ ಪೋಯಿ ಅರಳಿ ಎಲ್ಲರನ್ನೂ ಮರುಳಾಗಿಸುತ್ತದೆ. ಈ ಹೂಗಳನ್ನ ಪಿಂಕ್ ಪೋಯ್ ಅಥವಾ ಟಬಿಬಿಯಾ ರೋಸಿಯಾ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ..
ಈ ಹೂ ಸಾಮಾನ್ಯವಾಗಿ ಚಳಿಗಾಲದಲ್ಲಿ ಅರಳುತ್ತದೆ. ಇದು ಒಂದು ತಿಂಗಳುಗಳ ಕಾಲ ಮರಗಳಲ್ಲಿ ಇರುತ್ತೆ. ನಗರದಲ್ಲಿರುವ ಪಾರ್ಕ್, ಪ್ರಮುಖ ರಸ್ತೆಗಳಲ್ಲಿ ಈ ಮರಗಳಿವೆ. ಒಂದು ಮಾಹಿತಿಯ ಪ್ರಕಾರ ನಗರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಟ್ಯಾಬುಬಿಯಾ ಮರಗಳಿವೆ. ಇದರಲ್ಲಿ ಸುಮಾರು 15 ಜಾತಿಯ ಪ್ರಭೇದಗಳು ಇವೆ.
ಅಂದಹಾಗೆ ಈ ಮರಗಳ ವಿಶೇಷತೆ ಏನಂದ್ರೆ ಹೂ ಬಿಟ್ಟಾಗ ಈ ಮರಗಳಲ್ಲಿ ಒಂದೇ ಒಂದು ಎಲೆ ಕಾಣೊದಿಲ್ಲ. ಮರದ ತುಂಬೆಲ್ಲಾ ಪಿಂಕ್ ಹೂಗಳೇ ತುಂಬಿರುತ್ತವೆ.
ಇಡೀ ಮರವೇ ಒಂದು ಗುಲಾಬಿ ಛತ್ರಿಯಂತೆ ನಯನಮನೋಹರವಾಗಿ ಕಾಣುತ್ತದೆ. ಇದು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸೌಂದರ್ಯಕ್ಕೆ ಪಿಧಾ ಆಗಿರುವ ಸಿಲಕಾನ್ ಸಿಟಿ ಮಂದಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ.
ವರದಿ: ಸುಚಿತ್ರ ನಿಂಗೇಗೌಡ