ಇಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಗೆಲ್ಲುವಂತ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು, ಮೊದಲ ಭಾಗವಾಗಿ 124 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ. ಯಾವೆಲ್ಲ ಕ್ಷೇತ್ರಗಳಲ್ಲಿ ಗೊಂದಲ ಈರದೇ ಈರುವಂತ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಮೊದಲ ಪಟ್ಟಿಯಲ್ಲಿ ಯಾವುದೇ ಅಸಮಧಾನ ಸ್ಪೋಟ ಗೊಳ್ಳದಂತೆ ಕೈ ಪಡೆ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಬಹುತೇಖವಾಗಿ ಹಾಲಿ ಶಾಸಕರಿಗೆ ಈ ಪಟ್ಟಿಯಲ್ಲಿ ಹೆಸರು ಬರುತ್ತೆ ಎಂದು ಕಾಂಗ್ರೆಸ್ ವಲಯದಲ್ಲಿಯೇ ಚರ್ಚೆ ಆಗಿತ್ತು.
ಆದರೆ ಕೆಲವು ಹಾಲಿ ಶಾಸಕರನ್ನು ಮೊದಲ ಪಟ್ಟಿಯಿಂದ ಕೈ ಬಿಡಲಾಗಿದೆ. ಹರಿಹರ ಶಾಸಕ ರಾಮಪ್ಪ,ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ ಸೇರಿದಂತೆ ನಾಲ್ಕೈದು ಶಾಸಕರನ್ನು ಕೈ ಬಿಡಲಾಗಿದೆ. ಈ ಹಿನ್ನೆಲೆ ಈ ನಾಯಕರಿಗೆ ಟಿಕೇಟ್ ಕೈ ತಪ್ಪುತ್ತಾ ಎಂಬ ಭಯ ಶುರುವಾಗಿದೆ. ಆದರೆ ಕಾಂಗ್ರೆಸ್ ಮೂಲಗಳ ಪ್ರಕಾರ ಆ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಈ ಹಿನ್ನೆಲೆ ಅಂತಹ ಕ್ಷೇತ್ರಗಳನ್ನು ಕೈ ಮೊದಲ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಹೇಳಲಾಗಿದೆ.