ಸಿಎಂ ಬಸವರಾಜ್ ಬೊಮ್ಮಾಯಿ ಒಬ್ಬ ಶಕುನಿ ಇದ್ದಂದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಆರೋಪಕ್ಕೆ ಸಚಿವ ಬಿಸಿ ಪಾಟೀಲ್ ಕಿಡಿಕಾರಿದ್ದಾರೆ. ರಾಜ್ಯದ ಸಿಎಂ ವಿರುದ್ಧ ಸುರ್ಜೇವಾಲ ಕೆಟ್ಟ ಪದಗಳಲ್ಲಿ ನಿಂದಿಸಿದ್ದಾರೆ. ಪಕ್ಷಕ್ಕೆ ಮಾನ ಮಾರ್ಯಾದಿ ಇದ್ರೆ, ಸುರ್ಜೇವಾಲ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳಬೇಕು. ಒಂದು ವೇಳೆ ಸುರ್ಜೇವಾಲ ಕ್ಷಮೆ ಕೇಳಿಲ್ಲ ಅಂದ್ರೆ, ಸುರ್ಜೇವಾಲ ಹೋಗುವ ಕಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸ್ತಾರೆ ಎಂದು ಸುರ್ಜೆವಾಲಗೆ ಎಚ್ಚರಿಕೆ ನೀಡಿದ್ರು.
ಸುರ್ಜೇವಾಲಗೆ ಮೊದಲು ಕೇಳಿ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತ..? ಕಾಂಗ್ರೆಸ್ ನವರಿಗೆ ಇದುವರೆಗೂ ಅವರಿಗೆ ಮೀಸಲಾತಿ ಕೊಡೋಕೆ ಆಗಿರಲಿಲ್ಲ. ಕೇವಲ ಮುಸ್ಲಿಂರ ಒಲೈಕೆ ಮಾಡ್ತಾ ಬಂದಿದ್ದಾರೆ. ಡಿಕೆಶಿಯವರು ಮೀಸಲಾತಿ ವಾಪಸ್ ತಗೋತಿವಿ ಅಂತಾರೆ. ಅಷ್ಟು ಪರಿಜ್ಞಾನ ಇಲ್ವಾ ಅವರಿಗೆಅವರಿಗೆ ಸಮುದಾಯದ ಜನತೆಯೇ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.