Political NewsState News

ಅಶೋಕ್ ಖೇಣಿಗೆ ಖೆಡ್ಡಾ ತೋಡಲು ಮುಂದಾದ ಸರ್ಕಾರ…

26 ವರ್ಷಗಳ ಹಿಂದೆ ನೈಸ್ ಕಂಪನಿಗೆ ಟೌನ್ ನಿರ್ಮಾಣಕ್ಕೆ1906 ಎಕರೆ ನೀಡಲಾಗಿತ್ತು.ರೈತರಿಗೆ ಹೆಚ್ಚು ಪರಿಹಾರ ಕೊಡದೇ ಹೋದರೆ ಟೌನ್ ಶಿಪ್ ಗಾಗಿ ಕೊಟ್ಟಿದ್ದ ಜಾಗ ವಶಪಡಿಸಿಕೊಳ್ತೀವಿ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ರು. ಇಂದು ನಡೆದ ಸಚಿವ ಸಂಪುಟ ಉಪ ಸಮಿತಿಯಲ್ಲಿ ನಿರ್ಧಾರ ಮಾಡಲಾಗಿದ್ದು. 26 ವರ್ಷಗಳ ಹಿಂದೆ ನೈಸ್ ಕಂಪನಿಗೆ ಟೌನ್ ನಿರ್ಮಾಣಕ್ಕೆ 1906 ಎಕರೆ ನೀಡಲಾಗಿತ್ತು..

ಆಗ ಪ್ರತಿ ಎಕರೆಗೆ 41 ಲಕ್ಷ ನೀಡಿದ್ದ ನೈಸ್ ಕಂಪನಿ 2013 ರಲ್ಲಿ KIADB ಹೊಸ ರೇಟ್ ಕೊಡಬೇಕು ಅಂತ ನಿಯಮ ಮಾಡಿದೆ..ಇದರಂತೆ ಪ್ರತಿ ಎಕರೆಗೆ 3 ಕೋಟಿಗೂ ಹೆಚ್ಚು ಹಣ ಕೊಡಬೇಕು. 41 ಲಕ್ಷ ಕೊಟ್ಟಿರೋದು ರೈತರಿಗೆ ಅನ್ಯಾಯ. ರೈತರಿಗೆ ಅನ್ಯಾಯ ಆಗಲು ನಾವು ಬಿಡೊಲ್ಲ. ಎಕರೆಗೆ 3 ಕೋಟಿಗೂ ಹೆಚ್ಚು ಬೆಲೆ ಕೊಡಬೇಕು. ಇಲ್ಲದೆ ಹೋದ್ರೆ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕುತ್ತೇವೆ. ಅವರಿಗೆ ಕೊಟ್ಡ ಜಮೀನು ವಾಪಸ್ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!