ಅಹಮದಾಬಾದ್ : ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಬಿಪರ್ಜಾಯ್ ಚಂಡಮಾರುತದ ಪಥ ಬದಲಾಗಿದ್ದು, ಗುಜರಾತ್‌ನ ಸೌರಾಷ್ಟ್ರ- ಕಛ ವಲಯಕ್ಕೆ ಜೂನ್ 15 ರಂದು ಚಂಡಮಾರುತ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಗುಜರಾತ್ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಬಿಪರ್ಜಾಯ್ ಚಂಡಮಾರುತ 150 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಅಪಾಯವೆಂದು ಗುರುತಿಸಲಾದ ಕಡಲ ತೀರದ ಪ್ರದೇಶದಿಂದ 7,500 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸೌರಾಷ್ಟ್ರ- ಕರಾವಳಿಗಳ ಮಾಂಡವಿ, ಜಖಾವು ಬಂದರು ಸಮೀಪ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್‌ನಗರ್, ರಾಜ್ ಕೋಟ್, ಜುನಾಗಢ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಚಂಡಮಾರುತದ ಹಾವಳಿಗೆ ಒಳಗಾಗಲಿವೆ. ಇಲ್ಲಿ ನಿಷೇಧಾಜ್ಞೆ ಜಾರಿಗೆ ಸೂಚಿಸಲಾಗಿದೆ.
ಚಂಡಮಾರುತದ ಅಪಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್‌ನ ದಕ್ಷಿಣ ಹಾಗೂ ಉತ್ತರ ಕರಾವಳಿಗಳಲ್ಲಿ ಈಗಾಗಲೇ ಎಲ್ಲ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. 21 ಸಾವಿರ ಬೋಟ್‌ಗಳು ಈಗಾಗಲೇ ಲಂಗರು ಹಾಕಿವೆ. ವಿಪರೀತ ವರ್ಷಧಾರೆಯಿಂದಾಗಿ ಕರಾವಳಿ ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ. ವಿಪತ್ತು ನಿರ್ವಹಣಾ ಕಾರ್ಯಕ್ಕೆ 19 NDRF ಪಡೆಗಳನ್ನು ನಿಯೋಜಿಸಲಾಗಿದೆ. ಈ ಚಂಡಮಾರುತದಿಂದ ಉದ್ಭವಿಸಬಹುದಾದ ಪರಿಸ್ಥಿತಿ ಹಾಗೂ ಅದನ್ನು ಎದುರಿಸಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯಲ್ಲಿ ಪರಿಶೀಲನೆ ನಡೆಸಿದರು.
ರಕ್ಷಣಾ ತಂಡಗಳನ್ನು ಕೂಡಲೇ ಅಪಾಯದ ಸ್ಥಳಗಳಿಗೆ ರವಾನಿಸುವ ಕಾರ್ಯ ಆಗಬೇಕು. ಜನರು ಮತ್ತು ಜಾನುವಾರಗಳ ಶಾಂತರ ತ್ವರಿತವಾಗಿ ನಡೆಯಬೇಕು. ಕ್ಲೋನ್ ಹಾವಳಿ ತಡೆಯುವ ಕಾರ್ಯಾಚರಣೆಯ ಹೊಣೆಯನ್ನು ರಿಯ ಅಧಿಕಾರಿಗಳೇ ವಹಿಸಿಕೊಳ್ಳಬೇಕು. ತುರ್ತು ಸೇವೆಗಳಾದ ವಿದ್ಯುತ್, ದೂರವಾಣಿ, ಆರೋಗ್ಯ, ಕುಡಿಯುವ ನೀರಿನ ವ್ಯವಸ್ಥೆಗೆ ಅಡಚಣೆ ಆಗಬಾರದು. ದಿನದ 24 ತಾಸು ಕಾರ್ಯನಿರ್ವಹಿಸುವ ನಿಯಂತ್ರಣ ಕೇಂದ್ರವನ್ನು ತೆರೆಯಬೇಕೆಂದು ಎಂದು ಸೂಚಿಸಿದರು. ಸೌರಾಷ್ಟ್ರ ಹಾಗೂ ಕಛ ಮತ್ತು ಮಾಂಡವಿ (ಗುಜರಾತ್) ಹಾಗೂ ಕರಾಚಿ (ಪಾಕಿಸ್ತಾನ) ನಡುವಿನ ಪಾಕ್ ಕರಾವಳಿಯನ್ನು ಜೂನ್ 15 ರ ಹೊತ್ತಿಗೆ ಹಾದು ಹೋಗಲಿದೆ. ಸರಾಸರಿ 125 ರಿಂದ 135 ಕಿಮೀ ವೇಗದ ಸುಳಿಗಾಳಿ ಗಂಟೆಗೆ ಗರಿಷ್ಠ 150 ಕಿಮೀವರೆಗೂ ತಲುಪುವ ಸಾಧ್ಯತೆಯಿದೆ ಎಂದು NDRF ಮಾಹಿತಿ ನೀಡಿದೆ.