ಕರ್ನಾಟಕ ಗೆದ್ದ ಡಿಕೆಶಿಗೆ ಮತ್ತೊಂದು ಟಾಸ್ಕ್..!
ಬಂಡೆಗೆ ಹೈಕಮಾಂಡ್ ಕೊಟ್ಟ ಟಾಸ್ಕ್ ಏನು..?
ನಯಾ ಟಾಸ್ಕ್ ನಲ್ಲಿ ಸಕ್ಸಸ್ ಆಗ್ತಾರಾ ಶೂಟರ್..?
ರಾಜ್ಯ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್.. ಪಕ್ಷ ಸಂಘಟನೆಯಲ್ಲಿ ಮಾಸ್ಟರ್.. ಕಾರ್ಯತರ್ಕರ ಪಾಲಿನ ಬೂಸ್ಟರ್.. ಒನ್ ಅಂಡ್ ಓನ್ಲಿ ಡಿ.ಕೆ.ಶಿವಕುಮಾರ್..!
ಎಸ್..! ಡಿ.ಕೆ.ಶಿವಕುಮಾರ್ ಸದ್ಯ ದೇಶದ ರಾಜಕಾರಣದಲ್ಲಿ ಸದ್ದು ಮಾಡ್ತಿರೋ ಹೆಸರು.. ಕರ್ನಾಟಕದಲ್ಲಿ ಕೈ ಕ್ಯಾಪ್ಟನ್ ಆಗಿ ಡಿ.ಕೆ.ಶಿವಕುಮಾರ್ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ದಂಡಯಾತ್ರೆಗಳ ವಿರುದ್ಧ ಹೋರಾಡಿ ಕಾಂಗ್ರೆಸ್ ಬಾವುಟ ಹಾರಾಡುವಂತೆ ಮಾಡಿದ್ದಾರೆ. ಇದು ಕೇವಲ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಡಿ.ಕೆ.ಶಿವಕುಮಾರ್ ಹೆಸರು ಸದ್ದು ಮಾಡುವಂತೆ ಮಾಡಿದೆ.
ಕರ್ನಾಟಕದಲ್ಲಿನ ಕಾಂಗ್ರೆಸ್ ಗೆಲುವು ದೇಶದಾದ್ಯಂತೆ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟ್ ನೀಡಿದೆ. ಇತ್ತ ಇದೇ ಜೋಷ್ ನಲ್ಲಿ ಪಕ್ಕದ ರಾಜ್ಯವಾಗಿರುವ ತೆಲಂಗಾಣ ಕಾಂಗ್ರೆಸ್ ಕೂಡ ಎಲೆಕ್ಷನ್ ಗೆ ಸಜ್ಜಾಗುತ್ತಿದೆ. ಕರ್ನಾಟಕ ಎಲೆಕ್ಷನ್ ಗೂ ಮುನ್ನಾ ಪಕ್ಷವನ್ನ ತೊರೆದಿದ್ದ ತೆಲಂಗಾಣ ಕೈ ನಾಯಕರು ಈಗ ಮತ್ತೆ ಪಕ್ಷಕ್ಕೆ ವಾಪಸ್ ಆಗ್ತಾ ಇದ್ದಾರೆ.
ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣ ಗೆಲ್ಲೋಕೆ ಮಾಸ್ಟರ್ ಪ್ಲಾನ್ ಮಾಡಿದೆ. ಆ ಮಾಸ್ಟರ್ ಪ್ಲಾನ್ ಭಾಗಿವಾಗಿ ಡಿ.ಕೆ.ಶಿವಕುಮಾರ್ ಅವರನ್ನ ಅಖಾಡಕ್ಕೆ ಇಳಿಸೋಕೆ ಮುಂದಾಗಿದೆ. ಮೂಲಗಳ ಪ್ರಕಾರ, ಡಿ.ಕೆ.ಶಿವಕುಮಾರ್ ಅವರನ್ನ ತೆಲಂಗಾಣ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನಾಗಿ ನೇಮಿಸುವ ಸಾಧ್ಯತೆ ಇದೆ.
ಇದಕ್ಕೆ ಪುಷ್ಠಿ ನೀಡುವಂತೆ ತೆಲಂಗಾಣದ ರೇವಂತ್ ರೆಡ್ಡಿ, ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾಗಿದ್ದು, ಕುತೂಹಲ ಕೆರಳಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ತೆಲಂಗಾಣದತ್ತ ಪ್ರಯಾಣ ಬೆಳೆಸಲಿದ್ದಾರಂತೆ. ಅಲ್ಲದೇ ತೆಲಂಗಾಣದಲ್ಲೂ ಪ್ರತಿ ಜಿಲ್ಲೆಗೆ ಭೇಟಿ ನೀಡಿ, ವರದಿ ಸಿದ್ಧಪಡಿಸಿ ಗೆಲುವಿಗೆ ರಣತಂತ್ರ ರೂಪಿಸಲಿದ್ದಾರೆ. ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದಲ್ಲಿ ಡಿ.ಕೆ.ಶಿವಕುಮಾರ್ ಕಾರ್ಯತಂತ್ರ ರೂಪಿಸಲಿದ್ದಾರಂತೆ.
ಮುಂದಿನ ಅಕ್ಟೋಬರ್ ನಲ್ಲಿ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಅಲ್ಲಿನ ಆಡಳಿತರೂಢ ಬಿಆರ್ ಎಸ್ ಪಕ್ಷದಿಂದ ಕೆಲ ನಾಯಕರನ್ನ ಕಾಂಗ್ರೆಸ್ ಗೆ ಕರೆತರು ಆಪರೇಷನ್ ಹಸ್ತಕ್ಕೂ ಪ್ಲಾನ್ ಮಾಡಿಕೊಳ್ಳಲಾಗಿದೆಯಂತೆ. ಸದ್ಯದ ಟ್ರೆಂಡ್ ನೋಡಿದ್ರೆ ಕರ್ನಾಟಕದಂತೆ ತೆಲಂಗಾಣವನ್ನ ಗೆಲ್ಲೋಕೆ ಕಾಂಗ್ರೆಸ್ ಸಜ್ಜಾಗಿದ್ದು, ತೆಲಂಗಾಣದಲ್ಲಿ ಡಿಕೆಶಿ ಕಮಾಲ್ ಮಾಡ್ತಾರಾ ಕಾದು ನೋಡಬೇಕಾಗಿದೆ.
ಇದು ಅಲ್ಲದೇ ಮುಂದಿನ ಲೋಕಸಭಾ ಚುನಾವಣೆ ದೃಷ್ಠಿಯಿಂದಲೂ ಕಾಂಗ್ರೆಸ್ ಗೆ ತೆಲಂಗಾಣದ ಮೇಲೆ ವಿಶೇಷ ಆಸಕ್ತಿ ಇದೆ. ಸದ್ಯ ಕರ್ನಾಟಕದಲ್ಲಿ ಪಕ್ಷ ಅಧಿಕಾರದಲ್ಲಿದೆ. ಇಲ್ಲಿ ಕನಿಷ್ಠ 15 ರಿಂದ 20 ಸ್ಥಾನ ಗೆಲ್ಲುವ ಲೆಕ್ಕಾಚಾರವಿದೆ. ಮತ್ತೊಂದು ಕಡೆ ತೆಲಂಗಾಣದಲ್ಲಿ ಪಕ್ಷವನ್ನು ಬಲಪಡಿಸಿ, ಲೋಕಸಭೆಯಲ್ಲಿ ಸೀಟು ಗೆಲ್ಲುವ ಪ್ಲಾನ್ ಇದೆ. ಇತ್ತ ಕೇರಳದಲ್ಲೂ ಕೂಡ ಪಕ್ಷ ಬಲಿಷ್ಠವಾಗಿದೆ. ತಮಿಳುನಾಡಲ್ಲಿ ಡಿಎಂಕೆ ಜೊತೆ ಮೈತ್ರಿ ಕಾಂಗ್ರೆಸ್ ಗೆ ಪ್ಲಸ್ ಆಗಿದೆ. ಹೀಗಾಗಿ ಈ ನಾಲ್ಕು ರಾಜ್ಯಗಳ ಮೇಲೆ ಕಾಂಗ್ರೆಸ್ ದೃಷ್ಟಿಯನ್ನ ನೆಟ್ಟಿದೆ. ಇದೇ ಕಾರಣಕ್ಕೆ ಸಕ್ಸಸ್ ಫುಲ್ ಡಿಕೆಶಿಯನ್ನ ಬಳಸಿಕೊಳ್ಳೋಕೆ ಕೈ ಮುಂದಾಗಿದೆ.